ಸುಳ್ಯ, ಏ. 07 (DaijiworldNews/SM): ಹಿಂದಿನ ಕಾಲದಲ್ಲಿ ಸರಕಾರದ ಯೋಜನೆಗಳು ಫಲಾನುಭವಿಗಳನ್ನು ಪೂರ್ಣ ಪ್ರಮಾಣದಲ್ಲಿ ತಲುಪುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದ್ದು ಸರಕಾರದ ಪ್ರತಿಯೊಂದು ಯೋಜನೆಗಳು ಪಲಾನುಭವಿಳನ್ನು ತಲುಪುತ್ತಿವೆ ಎಂದು ಬಂದರು ಒಳನಾಡು ಜಲಸಾರಿಗೆ ಹಾಗೂ ಮೀನುಗಾರಿಕಾ ಸಚಿವ ಅಂಗಾರ ಹೇಳಿದರು.

ಅವರು ಬಹುಗ್ರಾಮ ಕುಡಿಯುವ ನೀರು" ಯೋಜನೆಯಡಿಯಲ್ಲಿ ಅರಂತೋಡಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ವೆಂಟೆಡ್ ಡ್ಯಾಂನ ಇದರ ಸ್ಥಳ ಪರಿಶೀಲಿಸಿ ಇಲ್ಲಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಗತ್ಯ ಇರುವ ಎಲ್ಲಾರ ಮನೆಯನ್ನು ತಲುಪಬೇಕು. ಈ ಉದ್ದೇಶ ಇರಿಸಿಕೊಂಡು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಹರೀಣಿ ದೇರಾಜೆ, ಉಪಾಧ್ಯಕ್ಷೆ ಶ್ವೇತಾ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾಮೇದಪ್ಪ, ಗ್ರಾಮ ಪಂಚಾಯತ್ ಸದಸ್ಯರಾದ ಶಿವಾನಂದ ಕುಕ್ಕುಂಬಳ, ಕೇಶವ ಅಡ್ತಲೆ, ವಿನೋದ ಚಂದ್ರಶೇಖರ, ಭವಾನಿ ತೊಡಿಕಾನ, ಹಾಗೂ ಇತರ ಗ್ರಾಮ ಪಂಚಾತ್ ಸದಸ್ಯರು, ಪಿ.ಡಿ.ಒ ಜಯಪ್ರಕಾಶ್, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಯ.ಯಂ. ಹಾಗೂ ಸದಸ್ಯರು ಇಲಾಖೆಯ ಇಂಜಿನಿಯರ್ ಅಧಿಕಾರಿಗಗಳು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.