ಪುತ್ತೂರು, ಏ. 09 (DaijiworldNews/HR): ಕೆಯ್ಯೂರು ಗ್ರಾಮದ ದೇರ್ಲ ನಿವಾಸಿಯೊಬ್ಬರು ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.09ರಂದು ನಸುಕಿನ ಜಾವ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನ್ನು ವೆಂಕಟ್ರಮಣ ಗೌಡರ ಪುತ್ರ ರಿಕ್ಷಾ ಚಾಲಕ ಶಿವರಾಜ್ (27) ಎಂದು ಗುರುತಿಸಲಾಗಿದೆ.
ಇನ್ನು ಆತ್ಮಹತ್ಯೆಗೆ ಮೊದಲು ಮೊಬೈಲ್ ಫೋನ್ ಸುಟ್ಟು ಹಾಕಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಈ ಬಗ್ಗೆ ಸಂಪ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821