ಕಡಬ, ಸೆ 14(SM): ಹೆತ್ತ ತಾಯಿಯ ಮೇಲೆಯೇ ಪುತ್ರನೋರ್ವ ಹಲ್ಲೆ ನಡೆಸಿದ ಅಮನವೀಯ ಘಟನೆ ಕಡಬ ಠಾಣಾ ವ್ಯಾಪ್ತಿಯ ಹಳೆನೇರಂಕಿಯಲ್ಲಿ ಸೆಪ್ಟೆಂಬರ್ 14ರ ಶುಕ್ರವಾರ ಸಂಜೆ ನಡೆದಿದೆ. ಕಡಬ ತಾಲೂಕಿನ ಹಳೆನೇರಂಕಿ ಗ್ರಾಮದ ರಬ್ಬರ್ ತೋಟ ನಿವಾಸಿ ಹೊನ್ನಪ್ಪ ಗೌಡ ಎಂಬವರ ಪುತ್ರ ಪರಮೇಶ್ವರ(26) ಎಂಬಾತನೇ ತನ್ನ ತಾಯಿಗೆ ಹಲ್ಲೆ ನಡೆಸಿದ ಕಿರಾತಕ.
ಮಂಗಳೂರಿನ ಹೋಟೆಲೊಂದರಲ್ಲಿ ಉದ್ಯೋಗದಲ್ಲಿರುವ ಆರೋಪಿ ರಜೆ ನಿಮಿತ್ತ ಮನೆಗೆ ತೆರಳಿದ್ದ ಎನ್ನಲಾಗಿದೆ. ಶುಕ್ರವಾರದಂದು ಸಂಜೆಯ ವೇಳೆಗೆ ಆರೋಪಿ ತಾಯಿ ಹೊನ್ನಮ್ಮರ ಕಾಲಿಗೆ ಕತ್ತಿಯಿಂದ ಕಡಿದಿದ್ದಾನೆ. ಮಾತ್ರವಲ್ಲದೆ ಕೈಯಿಂದ ಹೊಡೆದಿದ್ದಾನೆನ್ನಲಾಗಿದೆ. ಇನ್ನು ಈ ಬಗ್ಗೆ ಮಾಹಿತಿ ಪಡೆದ ಊರವರು ಸೇರಿಕೊಂಡು ಗಾಯಾಳುವನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.