ಸುಳ್ಯ ಅ: ರಾಮಾಯಣವನ್ನು ಬರೆದಂತ ವಾಲ್ಮೀಕಿ ಒಬ್ಬ ಬ್ರಹ್ಮಶ್ರೀಯಾಗಿದ್ದು .ರಾಮಾಯಣದ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಿಡಿಸಿಕೊಂಡರೆ ಮಾತ್ರ ವಾಲ್ಮೀಕಿ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ಅಭಿಪ್ರಾಯಪಟ್ಟರು.
ಅವರು ಇಲ್ಲಿ ಗುರುವಾರ ನಡೆದ , ನಾಡ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ವಾಲ್ಮಿಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಾಲ್ಮೀಕಿ ಜಯಂತಿ ಆಚರಣೆಯ ಬಗ್ಗೆ ಉಪನ್ಯಾಸ ನೀಡಿದರು.
ರಾಮಾಯಣ ಮಹಾಭಾರತದ ಬಗ್ಗೆ ದೇಶ ವಿದೇಶಗಳಲ್ಲಿ ಅಧ್ಯಾಯನ ಮಾಡುವವರಿದ್ದಾರೆ , ಆದರೆ ನಮ್ಮ ಮಕ್ಕಳಿಗೆ ಈ ಪವಿತ್ರ ಪುಸ್ತಕಗಳನ್ನು ಓದುವಂತೆ ಪ್ರೋತ್ಸಾಹಿಸುವುದಿಲ್ಲ ಎಂದರು. ಮಕ್ಕಳಿಗೆ ಪುಸ್ತಕಗಳನ್ನು ಓದಲು ಪ್ರೇರೆಪಿಸಬೇಕಾದ ಕೆಲಸ ಪ್ರತಿ ಮನೆ ಮನೆಯಲ್ಲೂ ಆಗಬೇಕೆಂದು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಸುಭೋಧ ಎಸ್ ರೈ, ನಾಡಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಯಂ.ಯಂ.ಗಣೇಶ್ ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮತ್ತಿತರರು ಉಪಸ್ಥಿತರಿದ್ದರು.