ಮಂಗಳೂರು ಸೆ14(SS): ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಕರಾವಳಿಯ ಜನಪ್ರಿಯ ನಾಯಕರೆನಿಸಿಕೊಂಡವರು. ಆದರೆ ಕೆಲ ದುಷ್ಕರ್ಮಿಗಳು ಸೇರಿಕೊಂಡು ಕುತ್ತಾರ್ ಪಂಡಿತ್ ಹೌಸ್ ಬಳಿ ಹಾಕಲಾಗಿರುವ ಸಚಿವ ಯು ಟಿ ಖಾದರ್ ಪ್ಲೆಕ್ಸ್ಗೆ ಹಾನಿಯುಂಟು ಮಾಡಿರುವ ಘಟನೆ ನಡೆದಿದೆ.
ಕಳೆದ ಕೆಲ ದಿನಗಳ ಹಿಂದೆ ನಗರ ಸಭೆಗೆ ನಡೆದ ಚುನಾವಣೆಯಲ್ಲಿ ಚೆಂಬುಗುಡ್ಡೆ ವಾರ್ಡ್ ನ ಕಾಂಗ್ರೆಸ್ ಪಕ್ಷದಿಂದ ಗೆದ್ದ ಸದಸ್ಯೆ ರಕ್ಷಿತಾ ಅವರಿಗೆ ಅಭಿನಂದನೆ ಕೋರಿ ಪಕ್ಷದ ಕಾರ್ಯಕರ್ತರು ಪ್ಲೆಕ್ಸ್ ಹಾಕಿದ್ದರು. ಇದೀಗ ಹಾಕಲಾಗಿರುವ ಪ್ಲೆಕ್ಸ್ಗೆ ದುಷ್ಕರ್ಮಿಗಳು ಹಾನಿಯುಂಟು ಮಾಡಿದ್ದಾರೆ.
ಈ ಘಟನೆಗೆ ಖಾದರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಈ ಹೇಯ ಕೃತ್ಯ ನಡೆಸಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದಾರೆ.