ಮಂಗಳೂರು, ಏ.13 (DaijiworldNews/MB) : ಸರ್ಕಾರದ ಸೂಚನೆಯಂತೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎರಡು ದಿನದಿಂದ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು ನೈಟ್ ಕರ್ಫ್ಯೂ ಉಲ್ಲಂಘನೆ ಮಾಡಿದ ಕಾರಣಕ್ಕೆ ಶನಿವಾರ 65 ಹಾಗೂ ಭಾನುವಾರ 13 ವಾಹನ ಮಾಲಕರ ಮೇಲೆ ಕೇಸು ದಾಖಲು ಮಾಡಲಾಗಿದೆ. ಎರಡು ದಿನಗಳಲ್ಲಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 78 ವಾಹನ ಮಾಲಕರ ವಿರುದ್ದ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/mb-130421-curfew.jpg)
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್, ನಗರದಲ್ಲಿ ಜನರು ಕರ್ಫ್ಯೂಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಆದರೆ ೧೦ ಗಂಟೆಗೆ ಅಂಗಡಿ ಮುಗ್ಗಟ್ಟು, ಹೊಟೇಲ್ಗಳನ್ನು ಬಂದ್ ಮಾಡಿದರೆ, ಹೊಟೇಲ್ ಮಾಲಕರು, ಸಿಬ್ಬಂದಿಗಳು, ಅಂಗಡಿ ಮಾಲಕರು, ಸಿಬ್ಬಂದಿಗಳು ಮನೆಗೆ ತೆರಳುವಾಗ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ. ಆದ್ದರಿಂದ 10 ಗಂಟೆಗೆ ಮೊದಲೇ ಮನೆಗೆ ತಲುಪುವಂತೆ ನೋಡಿಕೊಂಡು ಹೊಟೇಲ್, ಅಂಗಡಿಗಳನ್ನು ಮುಚ್ಚಬೇಕು ಎಂದು ತಿಳಿಸಿದ್ದಾರೆ.
ಹಾಗೆಯೇ ಪಾಲಿಕೆ ವ್ಯಾಪ್ತಿಯಲ್ಲಿ 49 ಹಗೂ ಹೊರಗಡೆ 4 ಸೇರಿ ಒಟ್ಟು 54 ಚೆಕ್ಪೋಸ್ಟ್ಗಳನ್ನು ಹಾಕಲಾಗಿದೆ ಎಂದು ಹೇಳಿದರು.