ನವದೆಹಲಿ, ಸೆ 15(SM): ಅಕ್ರಮ ಆಸ್ತಿ ಹಾಗೂ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ.ಶಿವಕುಮಾರ್ಗೆ ಷರತ್ತು ಬದ್ಧ ಜಾಮೀನು ದೊರೆತಿದೆ. ಆ ಮೂಲಕ ಬೀಸುವ ದೊಣ್ಣೆಯಿಂದ ಸಚಿವ ಡಿಕೆಶಿವಕುಮಾರ್ ಪಾರಾಗಿದ್ದಾರೆ. ಡಿಕೆಶಿ ಅವರ ದೆಹಲಿಯ ಮನೆಯಲ್ಲಿ ಪತ್ತೆಯಾದ ನಾಲ್ಕು ಕೋಟಿ ಹಣದ ಪ್ರಕರಣದ ಸಂಬಂಧ ಡಿ.ಕೆ. ಶಿವಕುಮಾರ್ ಅವರಿಗೆ ಇಡಿ ಯಿಂದ ಬಂಧನ ಭೀತಿ ಇದ್ದ ಕಾರಣ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ ೧೫ರಂದು ಆರ್ಥಿಕ ಅಪರಾಧ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿತ್ತು. ಆದೇಶವನ್ನು ಮಧ್ಯಾಹ್ನ ಮೂರು ಗಂಟೆಗೆ ಕಾಯ್ದಿರಿಸಲಾಗಿತ್ತು. ಮಧ್ಯಾಹ್ನ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಆದೇಶ ನೀಡಿದೆ. ಡಿಕೆಶಿಗೆ ಷರತ್ತು ಬದ್ದ ಜಾಮೀನು ಮಂಜೂರುಗೊಳಿಸಿದ್ದಾರೆ. ಆ ಮೂಲಕ ಶಿವಕುಮಾರ್ ಸದ್ಯಕ್ಕೆ ರಿಲೀಫ್ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ನ್ಯಾಯಾಲಯದಲ್ಲಿ ಹಾಜರಿದ್ದರು.
ಡಿ ಕೆ ಶಿವಕುಮಾರ್, ಸುನೀಲ್ ಕುಮಾರ್, ಆಂಜನೇಯ ಹಾಗೂ ರಾಜೇಂದ್ರಗೆ ಜಾಮೀನು ಮಂಜೂರಾಗಿದೆ. ಆರೋಪಿಗಳು ತಲಾ ರೂ.25 ಸಾವಿರ ನಗದು ಹಾಗೂ ಒಂದು ಲಕ್ಷ ಬಾಂಡ್ ಶ್ಯೂರಿಟಿ ನೀಡಬೇಕು. ಹಾಗೂ ಸಾಕ್ಷಿಗಳ ಮೇಲೆ ಪರಿಣಾಮ ಬೀರಬಾರದು ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.