ಮಂಗಳೂರು, ಅ 5: ಉಳ್ಳಾಲ ಮುಕ್ಕಚ್ಚೇರಿಯಲ್ಲಿ ಬುಧವಾರ ರಾತ್ರಿ ನಡೆದ ಜುಬೈರ್ ಹತ್ಯೆ ಯನ್ನು ಖಂಡಿಸಿ
ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾ ರಾಜ್ಯ ಉಪಾಧ್ಯಕ್ಷ ರಹೀಂ ನೀಡಿದ ಹೇಳಿಕೆಯ ವಿರುದ್ದ ಇದೀಗ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಕಾರ್ಯಕರ್ತನಾದ ಜುಬೈರ್ ಹತ್ಯೆಯಲ್ಲಿ ಕಾಂಗ್ರೆಸ್ ಕೈವಾಡದ ಬಗ್ಗೆ ಆರೋಪಿಸಿ ನಿನ್ನೆ ನೀಡಿದ್ದ ಸಾಮಾಜಿಕ ಜಾಲತಾಣ ಹಾಗೂ ಮಾದ್ಯಮ ಹೇಳಿಕೆಯನ್ನು ಆಕ್ಷೇಪಿಸಿ ಇಂದು ಉಚ್ಚಿಲ್ ವಿರುದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಸಂಬದ್ದ ಹೇಳಿಕೆ ನೀಡಿದ ರಹೀಂ ಉಚ್ಚಿಲ್ ಅವರನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯಿಸಿದರು, ಕೇಸ್ ದಾಖಲಿಸಿ ಮಾತನಾಡಿದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ರಹೀಂ ಉಚ್ಚಿಲ್ ಅವರನ್ನು ಶೀಘ್ರವೇ ಬಂಧಿಸದಿದ್ದರೆ ಠಾಣೆಯ ಮುಂದೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.