ನವದೆಹಲಿ, ಸೆ 16 (MSP): 2019 ರ ಲೋಕಸಭಾ ಚುನಾವಣೆ ದಿನಕ್ಕೊಂದು ಸುದ್ದಿಗಳು ಹೊರಬರುತ್ತಿವೆ. ಕೇಂದ್ರ ಆಡಳಿತಾ ವಿರೋಧಿ ಅಲೆ ಇರುವ ರಾಜ್ಯದಲ್ಲಿ ಬಿಜೆಪಿ, ತನ್ನದೇ ಆದ ಗೇಮ್ ಪ್ಲಾನ್ ಮಾಡುತ್ತಿದ್ದು, ಗೆಲ್ಲುಲು ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.
ಇನ್ನೊಂದೆಡೆ ರಾಜಕೀಯಕ್ಕೆ ಹೆಚ್ಚಿನ ಸಂಖ್ಯೆಯ ವೃತ್ತಿಪರರು ಬರಬೇಕೆಂಬುದು ಪ್ರಧಾನಿ ನರೇಂದ್ರಮೋದಿ ಅವರ ಆಸೆಯಾಗಿದ್ದು, ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೆಲೆಬ್ರಿಟಿಗಳನ್ನು ತನ್ನತ್ತ ಸೆಳೆಯಲು ಚಿಂತನೆ ನಡೆಸುತ್ತಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಸಿನಿಮಾ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಿಂಚಿದ್ದ 70 ಕ್ಕೂ ಹೆಚ್ಚು ವೃತ್ತಿಪರರನ್ನು ಕಣಕ್ಕಿಳಿಸಲು ಬಿಜೆಪಿ ಯೋಚಿಸಿದೆ. ಅದೇ ದೃಷ್ಟಿಕೋನದಲ್ಲಿ ಈ ಬಾರಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ನಟಿ ಸನ್ನಿ ಡಿಯೋಲ್, ಮಲಯಾಲಂ ಸಿನಿಮಾ ರಂಗದ ಮೇರು ನಟ ಮೋಹನ್ ಲಾಲ್ , ನಟಿ ಮಾಧುರಿ ದೀಕ್ಷಿತ್. ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್ ಅವರನ್ನು ಚುನಾವಣಾ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ.
ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಇವರು ಜನರೊಂದಿಗೆ ಉತ್ತಮ ಒಡನಾಟ ಹೊಂದಿರುತ್ತಾರೆ. ಅಲ್ಲದೆ ಇವರೆಲ್ಲರ ರಾಜಕೀಯ ಎಂಟ್ರಿಯಿಂದ ರಾಜಕಾರಣಕ್ಕೆ ವಿಭಿನ್ನ ದೃಷ್ಠಿಕೋನ ಸಿಗಲಿದೆ. ಹೊಸ ಚಿಂತನೆಗಳು ಮೂಡಲಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಹೀಗಾಗಿಯೇ ನವದೆಹಲಿ ಲೋಕಸಭಾ ಕ್ಷೇತ್ರದಿಂದ ಅಕ್ಷಯ್ ಕುಮಾರ್ ಅವರನ್ನು, ಗುರುದಾಸ್ ಪುರದಿಂದ ಸನ್ನಿ ಡಿಯೋಲ್ ಗುರುದಾಸ್ ಪುರ, ಮುಂಬೈ ನಿಂದ ಮಾಧುರಿ ದೀಕ್ಷಿತ್ ಮತ್ತು ತಿರುವನಂತಪುರಂ ಕ್ಷೇತ್ರದಿಂದ ಮೋಹನ್ ಲಾಲ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಲೆಕ್ಕಾಚಾರ ಹಾಕಲಾಗುತ್ತಿದೆ.