ಕೊಪ್ಪಳ, ಸೆ17(SS): ಇಲ್ಲಿನ ಕೋಟೆ ರಸ್ತೆ ಏರಿಯಾದಲ್ಲಿ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಗಣೇಶನನ್ನು ಪ್ರತಿಷ್ಠಾಪಿಸಿಸಲಾಗಿದ್ದು, ಗಣಪನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಮುಸಲ್ಮಾನರು ಅನ್ನ ಸಂತರ್ಪಣೆ ನಡೆಸಿದ ಘಟನೆ ನಡೆದಿದೆ.
ಶ್ರೀ ವಿನಾಯಕ ಮಿತ್ರಮಂಡಳಿ ಕಳೆದ 36 ವರುಷಗಳಿಂದ ಗಣೇಶೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ.ಈ ವರ್ಷದ ಗಜಾನನೋತ್ಸವ ನಿಮಿತ್ತ ಬೃಹತ್ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದೆ. 9 ದಿನಗಳವರೆಗೆ ಸಂಭ್ರಮದ ಗಣೇಶೋತ್ಸವ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತದೆ.
ಆದರೆ ಈ ಬಾರಿ ವಿಶೇಷವೆಂದರೆ ಮುಸ್ಲಿಮರೇ ಗಣೇಶ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಿದ್ದಾರೆ ಬಡಿಸಲಾಯಿತು. ಮುಸ್ಲಿಂ ಸಮುದಾಯದ ಮುಖಂಡರೇ ಮುಂದೆ ನಿಂತು ಭಕ್ತರಿಗೆ ಸಿರಾ, ಅನ್ನ, ಸಾಂಬಾರ್ ಪ್ರಸಾದ ಬಡಿಸಿದ್ದಾರೆ.
ಮುಸ್ಲಿಂ ಸಹೋದರರ ಈ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.