ಮಂಗಳೂರು, ಸೆ17(SS): ರಾಜಕೀಯವಾಗಿ ಅಧಿಕಾರ ಕಳೆದುಕೊಂಡಿರುವ ಮಾಜಿ ಸಚಿವ ರಮಾನಾಥ್ ರೈ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
ಬಂಟ್ವಾಳದಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ್ ರೈ ಹಾಡು ಹಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಳೆ ಹಿಂದಿ ಚಿತ್ರದ ಹಾಡೊಂದನ್ನು ಹಾಡಿದ ಮಾಜಿ ಸಚಿವರು ನೆರೆದಿದ್ದ ಅಪಾರ ಅಭಿಮಾನಿಗಳನ್ನು ರಂಜಿಸಿದ್ದಾರೆ. ರೈ ಹಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಜಿ ಸಚಿವ ರಮಾನಾಥ್ ರೈ ಬಾಲ್ಯದಲ್ಲಿ ಉತ್ತಮ ಕ್ರೀಡಾಪಟು ಆಗಿದ್ದರು. ಮಾತ್ರವಲ್ಲ ಸಂಗೀತ ಕ್ಷೇತ್ರದಲ್ಲಿಯೂ ರೈ ಅವರಿಗೆ ಅಪಾರ ಆಸಕ್ತಿ ಇತ್ತು. ಇದೀಗ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ರೈ ಅವರಿಗೆ ಹಾಡು ಹಾಡಲು ಅವಕಾಶ ಸಿಕ್ಕಿದ್ದು, ಬಾಲ್ಯದ ಜೀವನ ಮೆಲುಕು ಹಾಕಿದ್ದಾರೆ.
ಬರ್ಸಾತ್ ಚಿತ್ರದ ಜಿಂದಗಿ 'ಬರ್ ನಹೀ ಬೂಲೆಗೀ ಓ ಬರ್ಸಾತ್ ಕೀ ರಾತ್. ಏಕ್ ಹಸೀನಾಸೆ ಮುಲಾಕಾತ್ ಕೀ ರಾತ್...ಹಾಡನ್ನು ರೈ ಸುಶ್ರಾವ್ಯವಾಗಿ ಹಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಮಾತ್ರವಲ್ಲ ತುಳುವಿನಲ್ಲಿಯೂ ಹಾಡಿದ ಅವರು ಮೋಕೆದ ಸಿಂಗಾರಿ. ಉಂತುದೆ ವೈಯ್ಯಾರಿ ಹಾಡಿಗೆ ಧ್ವನಿ ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳಿಂದ ಚಪ್ಪಾಳೆಯ ಸುರಿಮಳೆ ಗಿಟ್ಟಿಸಿಕೊಂಡಿದ್ದಾರೆ. ಮಾತ್ರವಲ್ಲ ಎಲ್ಲರ ಮನ ಗೆದ್ದಿದ್ದಾರೆ.