ಪಾಟ್ನಾ, ಸೆ 18 (MSP): ವಿಚ್ಚೇದಿತ ಮಹಿಳೆಯೊಬ್ಬಳು ಮತ್ತೊಂದು ವಿವಾಹ ಆಗಿದ್ದಕ್ಕೆ ಆಕೆಯ ಮೇಲೆ ಮಾಜಿ ಪತಿ, ಮಾವ ಹಾಗೂ ಸಹಚರರು ಗ್ಯಾಂಗ್ ರೇಪ್ ನಡೆಸಿರುವ ಅಮಾನವೀಯ ಘಟನೆ ಉತ್ತರಪ್ರದೇಶ ರಾಜ್ಯದ ಮುರದಾಬಾದ್ ನಲ್ಲಿ ನಡೆದಿದೆ. ಒಂದು ವರ್ಷದ ಹಿಂದೆಯಷ್ಟೇ ಮುರದಾಬಾದ್ ನ ಮೈನಾಟೇರ್ ಗ್ರಾಮದ ವ್ಯಕ್ತಿಯೊಂದಿಗೆ ಆಕೆಯ ವಿವಾಹ ನಡೆದಿತ್ತು. ಆದರೆ ಆಗಸ್ಟ್ 17ರಂದು ಪತಿ ಆಕೆಗೆ ತಲಾಖ್ ನೀಡಿದ್ದನು. ಮೊದಲನೆಯ ಪತಿ ತಲಾಖ್ ನೀಡಿದ ನಂತರ ಆಕೆ ಅದೇ ಗ್ರಾಮದ ಯುವಕನೊಂದಿಗೆ ಎರಡನೇ ಮದುವೆ ಆಗಿದ್ದರು.
ಆದರೆ ಇದರಿಂದ ಸಿಟ್ಟಿಗೆದ್ದಿದ್ದ ಪತಿ ಹಾಗೂ ಮಾವ ತನ್ನ ಸಹಚರರೊಂದಿಗೆ ಆಗಮಿಸಿ ಆಕೆ ತನ್ನ ಎರಡನೇ ಪತಿ ಜೊತೆ ಅಲಹಾಬಾದ್ ಕೋರ್ಟ್ ಗೆ ಹೋಗಲೆಂದು ಬರೇಲಿ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ವೇಳೆ ಕಿಡ್ನಾಪ್ ಮಾಡಿದ್ದಾನೆ.
ಆಕೆಯನ್ನು ಪದವಿ ಕಾಲೇಜಿನ ಕಟ್ಟಡವೊಂದರಲ್ಲಿ ಕೂಡಿ ಹಾಕಿ ಆಕೆಯ ಮೊದಲ ಪತಿ, ಮಾವ ಮತ್ತು ಅದೇ ಗ್ರಾಮದ ಹಿರಿಯರು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಆರೋಪಿಗಳು ಪ್ರತಿದಿನ ಸ್ಥಳವನ್ನು ಬದಲಾಯಿಸುತ್ತಾ ಆಕೆಯ ಮೇಲೆ ಸುಮಾರು 8 ದಿನಗಳ ಕಾಲ ಅತ್ಯಾಚಾರ ನಡೆಸಿದ್ದಾರೆ. ಆದರೆ 8ನೇ ದಿನ ಕೊನೆಗೂ ಮಹಿಳೆ ಕಾಮುಕರಿಂದ ಬಂಧನದಿಂದ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾಳೆ. ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಕುಂದರಕಿ ಠಾಣೆ ಪೊಲೀಸರಿಗೆ ಪ್ರಕರಣ ದಾಖಲಾಗಿತ್ತು. ಘಟನೆ ಕುರಿತಂತೆ 24 ಗಂಟೆಯಲ್ಲಿ ವರದಿ ನೀಡಬೇಕು್ ಅಲ್ಲದೆ ಸಂತ್ರಸ್ತ ಮಹಿಳೆಗೆ ರಕ್ಷಣೆ ನೀಡಬೇಕೆಂದು ಎಸ್ಎಸ್ಪಿ ರವೀಂದ್ರ ಆದೇಶಿಸಿದ್ದಾರೆ.