ಕಾಸರಗೋಡು, ಸೆ 18(SM): ನೇಣು ಬಿಗಿದ ಸ್ಥಿತಿಯಲ್ಲಿ ಶಿಕ್ಷಕಿಯ ಮೃತದೇಹ ಪತ್ತೆಯಾದ ಘಟನೆ ಎಡನೀರು ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಎಡನೀರು ಕಳರಿಯ ಜೇಷ್ಮಾ(26) ಮೃತ ಶಿಕ್ಷಕಿ.
ಜೇಷ್ಮಾ ಎಡನೀರು ಸರಕಾರಿ ಹಯರ್ ಸೆಕಂಡರಿ ಶಾಲೆಯ ತಾತ್ಕಾಲಿಕ ಗಣಿತ ಶಿಕ್ಷಕಿ ಯಾಗಿದ್ದರು. ಶಾಲೆಗೆ ತೆರಳಲು ಸಿದ್ಧತೆಯಲ್ಲಿದ್ದು ಕೊಠಡಿಗೆ ತೆರಳಿದ್ದ ಈಕೆ ಹಲವು ಸಮಯವಾದರೂ ಹೊರ ಬರದಿದ್ದುರಿಂದ ಸಂಶಯಗೊಂಡು ಮನೆಯವರು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ. ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ. ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.