ಆರ್.ಬಿ.ಜಗದೀಶ್
ಕಾರ್ಕಳ,ಸೆ 19 (MSP): ರಾಜ್ಯ ಮಟ್ಟದಲ್ಲಿ ನೈರ್ಮಲ್ಯ ರತ್ನ ಪ್ರಶಸ್ತಿಯ ಮಾನವನ್ನು ಉಳಿಸಿಕೊಂಡಿರುವ ಕಾರ್ಕಳ ತಾಲೂಕು ಪಂಚಾಯತ್ ನೂತನವಾಗಿ ರೂ.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಶೌಚಾಲಯವು ಸಾರ್ವಜನಿಕರ ಬಳಕೆಗೆ ಸದ್ದುಪಯೋಗವಾಗುತ್ತದೆ.
ಪಾಳು ಬಿದ್ದ ಶೌಚಾಲಯದ ಕುರಿತು ಬೆಳಕು ಚೆಲ್ಲಿತ್ತು
ತಾಲೂಕು ವ್ಯಾಪ್ತಿಯ ಮೂಲೆ ಮೂಲೆಗಳಿಂದ ಸಾರ್ವಜನಿಕರು ಕಚೇರಿಯ ಕೆಲಸ ಗಳಿಗೆಂದು ಬರುತ್ತಿದ್ದಾರೆ. ಇದು ಮಾತ್ರ ಮಾತ್ರವಲ್ಲದೇ ಸರಕಾರಿ ಸಭೆ ಸಮಾರಂಭಗಳು ಇಲ್ಲಿನ ಸಭಾಂಗಣಗಳಲ್ಲಿ ನಡೆಯುತ್ತಿದ್ದು ಅದರಲ್ಲಿ ಪಾಲ್ಗೊಳ್ಳಲು ವಿವಿಧ ಇಲಾಖೆಗಳ ಸಿಬ್ಬಂದಿಗಳು,ಅಧಿಕಾರಿಗಳು, ತರಬೇತಿ ಪಡೆಯುವವರು, ಜನಪ್ರತಿನಿಧಿಗಳು ಮೊದಲಾದವರು ಅಗಮಿಸುತ್ತಿದ್ದು, ಅವರಿಗೆ ದೇಹಭಾದೆ ತೀರಿಸಿಕೊಳ್ಳಲು ಸಮರ್ಪಕವಾಗಿ ಶೌಚಾಲಯ ಇಲ್ಲಿರಲಿಲ್ಲಿಲ್ಲ. ಅಲ್ಲಿದ್ದ ಪಾಳು ಬಿದ್ದ ಶೌಚಾಯಲಕ್ಕೆ ದಿಕ್ಕು ದೆಶೆ ಇರಲಿಲ್ಲ. ಬಾಗಿಲು ಮುರಿಕೊಂಡ ಸ್ಥಿತಿಯಲ್ಲಿತ್ತು. ಗಬ್ಬುವಾಸನೆ ಬಡಿಯುತ್ತಿದ್ದ ಶೌಚಾಲಯದೊಳಗಿನ ಬ್ಯಾಸೀನ್ ಪೂರ್ತಿ ಮಲ ತುಂಬಿಕೊಂಡಿತ್ತು. ತ್ಯಾಜ್ಯ ಹರಿದು ಹೋಗುವ ಕೊಳವೆಗೆ ಅಡ್ಡವಾಗಿ ಕುಡಿಯುವ ನೀರಿ ಬ್ಲಾಸ್ಟಿಕ್ ಬಾಟಲಿ ಇರಿಸಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ನಾಗರಿಕನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ತಾಲೂಕು ಪಂಚಾಯತ್ ಆಡಳಿತವು ದಿವ್ಯ ನಿರ್ಲಕ್ಷ್ಯ ತೋರಿರುವ ಕುರಿತು 2017 ಸಪ್ಪೆಂಬರ್ 12ರಂದು ದಾಯ್ಜಿವರ್ಲ್ಡ್ ನೈರ್ಮಲ್ಯ ರತ್ನ ಪ್ರಶಸ್ತಿ ದಕ್ಕಿಸಿಕೊಂಡ ಕಾರ್ಕಳ ತಾಲೂಕು ಪಂಚಾಯತ್ನ ಬಣ್ಣಬಯಲು! ಎಂಬ ಶೀರ್ಪಿಕೆಯಡಿಯಲ್ಲಿ ಸಮಗ್ರ ವರದಿಯನ್ನು ಪ್ರಕಟಿಸುವ ಮೂಲಕ ಆಡಳಿತಕ್ಕೆ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕಾರ್ಯ ನಡೆಸಿತ್ತು. ಈ ಬೆಳವಣಿಗೆಯ ಬಳಿಕ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿಯಲ್ಲಿಯೂ ಇದೇ ವಿಷಯದ ಕುರಿತು ಪ್ರತಿಧ್ವನಿಸಿತ್ತಲ್ಲದೇ ನೂತನ ಶೌಚಾಲಯ ನಿರ್ಮಾಣಕ್ಕೆ ತಾ.ಪಂ. ಸಂಪೂರ್ಣ ಸ್ವಚ್ಚತಾ ಅಂದೋಲನದ ನೈರ್ಮಲ್ಯ ಪ್ರಶಸ್ತಿ ಬಂದ ಅನುದಾನದಲ್ಲಿ ರೂ. ೫ ಲಕ್ಷವನ್ನು ಇದಕ್ಕಾಗಿ ವಿನಿಯೋಗಿಸಲಾಗಿತ್ತು.
200-11ನೇ ಸಾಲಿನಲ್ಲಿ ನೈರ್ಮಲ್ಯ ರತ್ನ
ರಾಜ್ಯದ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ 2010-11ನೇ ಸಾಲಿನಲ್ಲಿ ಕೊಡಮಾಡಿಕೊಂಡ ಗ್ರಾಮೀಣ ಸ್ವಚ್ಛತೆಯ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಾರ್ಕಳ ತಾಲೂಕು ಪಂಚಾಯತ್ಗೆ ನೈರ್ಮಲ್ಯ ರತ್ನ ದ್ವಿತೀಯ ಪ್ರಶಸ್ತಿಯನ್ನು ಮುಖ್ಯಮಂತ್ರಿ ಪ್ರಧಾನ ಮಾಡಿದ್ದರು. ನೈರ್ಮಲ್ಯ ರತ್ನ ಪ್ರಶಸ್ತಿ ಫಲಕ ಹಾಗೂ 15 ಲಕ್ಷ ರೂ. ನಗದನ್ನು ನೀಡಿ ಕಾರ್ಕಳ ತಾಲೂಕು ಪಂಚಾಯತ್ಗೆ ಗೌರವಿಸಲಾಗಿತ್ತು.
ಪ್ರಶಸ್ತಿಗೆ ಮಾನಂದಂಡಗಳು
ತಾಲೂಕು ಪಂಚಾಯತ್ ಕಟ್ಟಡ, ಕಚೇರಿ ನಿರ್ವಹಣೆ, ಸಾರ್ವಜನಿಕ ಶೌಚಾಲಯ ಹಾಗೂ ಸ್ವಚ್ಚತೆ, ಕುಡಿಯುವ ನೀರು, ಭೂನಕ್ಷೆ, ಪರಿಸರ ಸ್ವಚ್ಚತೆ, ತಾಲೂಕಿನ ಅಂಕಿ ಅಂಶದ ಪಕ್ಷಿನೋಟ, ಹಿಂದಿನ ಅವಧಿಯಲ್ಲಿ ತಾಲೂಕು ವ್ಯಾಪ್ತಿಯಲ್ಲಿದ್ದ ಶೌಚಾಲಯಗಳು, ತೆರಿಗೆ ವಸೂಲಾತಿ , ನಳ್ಳಿ ನೀರು ಸಂಪರ್ಕ, ಶಾಲೆಗಳು, ಅಂಗನವಾಡಿ ಗಳು, ತಾಲೂಕು ಪಂಚಾಯತ್ನ ಪ್ರಗತಿ ವಿವರ, ಶಾಲಾ ಪೀಠೋಪಕರಣ, ಕ್ರೀಡಾಸಾಮಾಗ್ರಿಗಳು, ಸ್ವಚ್ಚತೆಯ ಕುರಿತು ತಾಲೂಕು ಮಟ್ಟದಲ್ಲಿ ನಡೆದಿರುವ ಕಾರ್ಯಕ್ರಮಗಳು, ತರಬೇತಿಗಳು, ಪ್ರಚಾರಗಳು, ಜನಜಾಗೃತಿ, ಬೀದಿ ನಾಟಕ ಯಕ್ಷಗಾನದ ಜಾಗೃತಿ, ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಪರಿಸರ ಜಾಗೃತಿ, ಸ್ವಚ್ಚತಾ ಆಂದೋಲನಾ, ಶೌಛಾಲಯ ರಚನೆ, ವಿವಿಧ ವಿನ್ಯಾಸದ ಗೋಡೆ ಬರಹ, ಶಾಲಾ ಶಿಕ್ಷಕರಿಂದ ಜಾಗೃತಿ, ಗ್ರಾಮ ಪಂಚಾಯತ್ ಸದಸ್ಯರಿಂದ ವಾರ್ಡ್ ಕಮಿಟಿ ಗಳಿಂದ ಬಲವರ್ಧನೆ, ಅಂಗನವಾಡಿ ಕೇಂದ್ರಗಳಲ್ಲಿ ಭಿತ್ತಿಪತ್ರ, ಪರಿಸರದಲ್ಲಿ ಗಿಡ ನೆಡುವುದು, ಆರೋಗ್ಯ ತಪಾಸಣೆ ಒಳಗೊಂಡಿದೆ.
ಸ್ವಚ್ಚತಾ ಆಂದೋಲನಕ್ಕೆ ಸ್ವಂದಿಸಿಲ್ಲ
ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಚತೆಯ ಪರಿಕಲ್ಪನೆಯೊಂದಿಗೆ ಸ್ವಚ್ಚ ಭಾರತ್ ಅಭಿಯಾನ ಕೈಗೊಂಡು ಹಲವು ಕಾರ್ಯಕ್ರಮಗಳ ಯೋಜನೆ ಹಾಕಿ ಕೊಂಡಿದ್ದಾರೆ. ಅದಕ್ಕೆ ಹಲವು ಸಂಘ-ಸಂಸ್ಥೆಗಳು ಸಾಥ್ ನೀಡಿದರೂ ಕಾರ್ಕಳ ತಾಲೂಕು ಪಂಚಾಯತ್ ಸ್ವಂದನೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.