ಕಾಸರಗೋಡು, ಸೆ 19(SM): ಎರಡೂವರೆ ವರ್ಷದ ಬಾಲಕ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಸೆಪ್ಟೆಂಬರ್ 19ರ ಬುಧವಾರದಂದು ನಗರದ ಪಡನ್ನ ಎಂಬಲ್ಲಿ ನಡೆದಿದೆ.
ಪಡನ್ನ ವಳಿಯ ಜುಮಾ ಮಸೀದಿ ಸಮೀಪದ ಕೆ.ಎಂ.ಸಿ. ಸಿದ್ದಿಕ್ ರವರ ಪುತ್ರ ಮಹಮ್ಮದ್ ಶಾಸೀಮ್ ಮೃತ ಬಾಲಕ ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಆಡವಾಡುತ್ತ ಮನೆಯಿಂದ ಹೊರಗಡೆ ಬಂದಿದ್ದ. ಈ ಸಂದರ್ಭ ಮನೆ ಸಮೀಪದಲ್ಲಿರುವ ಕೆರೆ ಬಳಿಗೆ ಬಾಲಕ ತೆರಳಿದ್ದಾನೆ. ಅದೇ ಸಂದರ್ಭದಲ್ಲಿ ಆತ ಕಾಲು ಜಾರಿ ಕೆರೆಗೆ ಬಿದ್ದು, ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತಂತೆ ಕಾಸರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.