ಕಾರ್ಕಳ, ಸೆ 20 (MSP): ಮುಂಡ್ಕೂರು ಸಚ್ಚರಿಪೇಟೆ ಬೊಮ್ಮಯ ಲಚ್ಚಿಲ್ನ ನಿವಾಸಿ ಗಿರಿಜಾ ಪೂಜಾರಿ (50) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಾಲ್ವರು ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕಡಂದಲೆಯ ಜಾನ್ ಕ್ಲೋಡಿಯನ್(57), ಮುಂಡ್ಕೂರಿನ ಪದ್ಮನಾಭ ಸಾಲಿಯಾನ್(42), ಮಂಡ್ಕೂರು ಅಲಂಗಾರುಗುಡ್ಡೆಯ ಸುನೀಲ್(30), ಪೊಸ್ರಾಲ್ ಶಿವರಾಮ್ ಶೆಟ್ಟಿ(80) ಪ್ರಕರಣದಲ್ಲಿ ಬಂಧಿತರಾದವರು. ಆರೋಪಿಗಳಿಂದ 2 ಕಾರುಗಳು, 2 ಮೊಬೈಲ್ ಹಾಗೂ 35 ಸಾವಿರ ನಗದನ್ನು ಪೊಲೀಸರು ವಶಪಡಿಸಿದ್ದಾರೆ.
ಘಟನೆಯ ವಿವರ
ಸಪ್ಪೆಂಬರ್ 8ರ ಸಂಜೆ 7ಗಂಟೆಗೆ ಕನ್ನಡಬೆಟ್ಟುನಲ್ಲಿರುವ ತವರು ಮನೆಗೆಂದು ಹೊರಟ ಗಿರಿಜಾ ಪೂಜಾರಿ ನಿಗೂಢವಾಗಿ ರೀತಿಯಲ್ಲಿ ನಾಪತ್ತೆಯಾಗಿದ್ದರು. ಆದರೆ ಅವರು ಹಂದಿಗಿಟ್ಟ ವಿದ್ಯುತ್ ಉರುಳಿಗೆ ಸಿಲುಕಿ ಸಾವನಪ್ಪಿದ್ದರು. ಇನ್ನು ತನಿಖೆ ಹಾದಿ ತಪ್ಪಿಸಲು ಮಹಿಳೆಯ ಶವವನ್ನು ಆರೋಪಿಗಳು ನಿಟ್ಟೆ ಪರಪ್ಪಾಡಿ ಎಂಬಲ್ಲಿ ಎಸೆದಿದ್ದು, ಘಟನೆ ನಡೆದು ಸುಮಾರು ಒಂಬತ್ತು ದಿನಗಳ ಬಳಿಕ ಪ್ರಕರಣವನ್ನು ಭೇದಿಸುವಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸರು ಯಶ ಸಾಧಿಸಿದ್ದರು.