ಕಾಸರಗೋಡು, ಸೆ 21 (MSP): ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಣಿಜ್ಯ ಪರವಾನಿಗೆ ನೀಡುವ ಬಗ್ಗೆ ಬೃಹತ್ ಪ್ರವಾಸಿ ವಿಮಾನ ಹಾರಾಟ ಪರಿಶೀಲನೆ ಗುರುವಾರ ಯಶಸ್ವಿಯಾಗಿ ನಡೆಯಿತು.
ತಿರುವನಂತಪುರ ಅಂತಾರಾಷ್ತ್ರೀಯ ವಿಮಾನ ನಿಲ್ದಾಣದಿದಿಂದ ಸುಮಾರು 200 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾದ ಬೋಯಿಂಗ್ 737 ವಿಮಾನ ಟೇಕಫ್ ಆಗಿ 45 ನಿಮಿಷಗಳ ಬಳಿಕ ಬೆಳಗ್ಗೆ 11.35 ಕ್ಕೆ ಯಶಸ್ವಿಯಾಗಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿಯಿತು.
ಇದಕ್ಕೂ ಮೊದಲು ಆರು ಬಾರಿ ಹಾರಾಟ ನಡೆಸಿ ಎಲ್ಲಾ ಸುರಕ್ಷಾ ಕ್ರಮದ ಬಗ್ಗೆ ಪರಿಶೀಲಿಸಲಾಗಿದೆ. ಇದೇ ಪ್ರಥಮ ಬಾರಿಗೆ ದೊಡ್ಡ ವಿಮಾನ ಇಳಿಸಿ ಪರಿಶೀಲನೆ ನಡೆಸಲಾಯಿತು. ಇದರೊಂದಿಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಪೂರ್ಣಗೊಳಿಸಲಾಯಿತು. ದಿಲ್ಲಿಯ ವಿಮಾನಯಾನ ಸಚಿವಾಲಯದ ತಪಾಸಣೆ ವರದಿ ಸಲ್ಲಿಸಿ ವರದಿ ಆಧಾರದಲ್ಲಿ ಇದೇ ತಿಂಗಳು ಕಣ್ಣೂರು ವಿಮಾನ ನಿಲ್ದಾಣಕ್ಕೆ ಲೈಸೆನ್ಸ್ ನೀಡಲಾಗುವುದು. ನವೆಂಬರ್ ಮೊದಲ ವಾರದಲ್ಲಿ ವಿಮಾನ ಸಂಚಾರ ನಡೆಸಲು ಸಾಧ್ಯವಾಗಲಿದೆ.