ಬಂಟ್ವಾಳ, ಸೆ 21(SM): ಪಾಣೆಮಂಗಳೂರು ಗೂಡಿನ ಬಳಿ ಬಾಲಕಿಯ ಲೈಂಗಿಕ ದೌರ್ಜನ್ಯ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರಕರಣ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳು ಆರಂಭಗೊಂಡಿದೆ. ಶುಕ್ರವಾರದಂದು ಪ್ರಕರಣದ ವಿರುದ್ಧ ಜಮಾಅತ್ ಹಾಗೂ ವಿವಿಧ ಸಂಘಟನೆಗಳಿಂದ ಮೌನ ಕಾಲ್ನಡಿಗೆ ಜಾಥ
ನಡೆಯಿತು.
ಸಾರ್ವಜನಿಕರಿಂದ ಪ್ರತಿಭಟನೆ
ಅತ್ಯಾಚಾರ ಎಸಗಿದ ಆರೋಪಿಗಳು
ಆರೊಪಿಗಳಿಗೆ ಕಠಿಣ ಪ್ರಮಾಣದ ಶಿಕ್ಷೆಯನ್ನು ನೀಡುವಂತೆ ಒತ್ತಾಯಿಸಿ ಗೂಡಿನ ಬಳಿಯ ಜಮಾಅತ್ ಆಡಳಿತ ಕಮಿಟಿ, ವಿವಿಧ ಸಂಘಟನೆಗಳು ಹಾಗೂ ಸಮಸ್ತ ನಾಗರಿಕರು ಕಪ್ಪುಪಟ್ಟಿ ಕಟ್ಟಿ ಬಿ.ಸಿ. ರೋಡಿನಲ್ಲಿ ಕಾಲ್ನಡಿಗೆ ಜಾಥಾ ನಡೆಸಿದರು. ಮಾತ್ರವಲ್ಲದೆ ಪ್ರಕರಣವನ್ನು ಖಂಡಿಸಿ ಗೂಡಿನ ಬಳಿಯ ಅಂಗಡಿ ಮುಂಗಟ್ಟುಗಳನ್ನು ಇಂದು ಮುಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಕಾನೂನು ರಕ್ಷಣೆ, ಪರಿಹಾರ ನೀಡಬೇಕು. ಪ್ರಕರಣದಲ್ಲಿ ಶಾಮೀಲಾಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಬೇಕು. ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳನ್ನು ಕೂಡ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಬಳಿಕ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹಾಗೂ ಬಂಟ್ವಾಳ ಎಸ್ಸೈ ಚಂದ್ರಶೇಖರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಕಾಲ್ನಡಿಗೆ ಜಾಥಾ ನಡೆಯುವ ಮೊದಲು ಗೂಡಿನ ಬಳಿ ಮಸೀದಿಯಲ್ಲಿ ಖಂಡನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಜಮಾಅತ್ ನ ಅಧ್ಯಕ್ಷ ಹಾಜಿ ಜಿ. ಮುಹಮ್ಮದ್, ಮಾಜಿ ಪುರಸಭಾ ಸದಸ್ಯ ಇಕ್ಬಾಲ್ ಐಎಂಆರ್, ಜಿ.ಕೆ.ಅಹ್ಮದ್ ಬಾವ, ಜಿ.ಕೆ.ಬಶೀರ್ ಮತ್ತಿತರರು ಉಪಸ್ಥಿತರಿದ್ದರು.