ಕಾಸರಗೋಡು, ಮೇ.02 (DaijiworldNews/HR): ವಿಧಾನಸಭಾ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಮೂರರಲ್ಲಿ ಯುಡಿಎಫ್ ಮತ್ತು ಎರಡರಲ್ಲಿ ಎಲ್ಡಿಎಫ್ ಆರಂಭಿಕ ಮುನ್ನಡೆ ಸಾಧಿಸಿದೆ. ಮಂಜೇಶ್ವರದಲ್ಲಿ ಯುಡಿಎಫ್ನ ಎ.ಕೆ.ಎಂ ಅಶ್ರಫ್, ಕಾಸರಗೋಡಿನಲ್ಲಿ ಎನ್.ಎ. ನೆಲ್ಲಿಕುನ್ನು, ಉದುಮದಲ್ಲಿ ಬಾಲಕೃಷ್ಣ ಪೆರಿಯ ಮುನ್ನಡೆಯ ಲ್ಲಿದ್ದಾರೆ. ಎಲ್ಡಿಎಫ್ ಕಾಞಂಗಾಡ್ನಲ್ಲಿ ಇ. ಚಂದ್ರಶೇಖರನ್, ತ್ರಿಕ್ಕರಿಪೂರದಲ್ಲಿ ಎಂ ರಾಜಗೋಪಾಲ್ ಮುನ್ನಡೆಯಲ್ಲಿದ್ದಾರೆ.
ಕಾಞಂಗಾಡು ವಿಧಾನಸಭೆ ಕ್ಷೇತ್ರ :
ಇ.ಚಂದ್ರಶೇಖರನ್ (ಎಡರಂಗ) : 5285 ಮತಗಳು - 2419 ಮತದಿಂದ ಮುನ್ನಡೆ
ಮಂಜೇಶ್ವರ ವಿಧಾನಸಭೆ ಕ್ಷೇತ್ರ:
ಎ.ಕೆ.ಎಂ.ಅಶ್ರಫ್ (ಐಕ್ಯರಂಗ): 4502 ಮತಗಳು-310 ಮತದಿಂದ ಮುನ್ನಡೆ
ಉದುಮಾ ವಿಧಾನಸಭೆ ಕ್ಷೇತ್ರ :
ಬಾಲಕೃಷ್ಣನ್ ಪೆರಿಯ (ಐಕ್ಯರಂಗ) - 3479 ಮತದಿಂದ ಮುನ್ನಡೆ
ಕಾಸರಗೋಡು ವಿಧಾನಸಭೆ ಕ್ಷೇತ್ರ :
ಎನ್.ಎ.ನೆಲ್ಲಿಕುನ್ನು(ಐಕ್ಯರಂಗ ): ಒಟ್ಟು ಮತಗಳು- 4777 - 2226 ಮತದಿಂದ ಮುನ್ನಡೆ.