ಕುಂದಾಪುರ, ಸೆ 24 (MSP): ಹತ್ತನೆ ತರಗತಿ ವಿದ್ಯಾರ್ಥಿಯೋರ್ವಳನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿ ಗರ್ಭದಾನ ಮಾಡಿದ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಸೆ23ರ ಭಾನುವಾರ ನಡೆದಿದೆ. ಅತ್ಯಾಚಾರ ನಡೆಸಿದ ಆರೋಪಿಯನ್ನು ವಂಡ್ಸೆ ಸಮೀಪದ ಹರವರಿ ನಿವಾಸಿ ಸುಮಂತ ಪೂಜಾರಿ ಎಂದು ಗುರುತಿಸಲಾಗಿದೆ.
ಆರೋಪಿ ಸುಮಂತ ಪೂಜಾರಿ ಬಿಕಾಂ ಪದವಿ ಮುಗಿಸಿ ಸಿಎ ಮಾಡಲೆಂದು ಮನೆಯಲ್ಲಿಯೇ ಇದ್ದ. ಈ ಸಂದರ್ಭ ಆತನ ಸೋದರ ಸಂಬಂಧಿ ಯುವತಿಯ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ್ದು, ಅಪ್ರಾಪ್ತೆ ವಿದ್ಯಾರ್ಥಿನಿಗೆ ಉದರ ಸಂಬಂಧ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಇದಕ್ಕಾಗಿ ಆಕೆಯ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ಪರೀಕ್ಷೆಯ ಬಳಿಕ ವಿದ್ಯಾರ್ಥಿನಿ ಗರ್ಭವತಿಯಾಗಿರುವುದು ತಿಳಿದು ಬಂದಿದೆಯೆನ್ನಲಾಗಿದೆ.
ವೈದ್ಯಕೀಯ ವರದಿಯ ಬಳಿಕ ಮನೆಯವರು ವಿದ್ಯಾರ್ಥಿನಿಯನ್ನು ವಿಚಾರಿಸಿದ್ದು, ಆಗ ಆಕೆ ಆರೋಪಿ ಸುಮಂತ ಪೂಜಾರಿ ನನ್ನನ್ನು ಅತ್ಯಾಚಾರ ನಡೆಸಿದ್ದು, ಯಾರಿಗಾದರೂ ಹೇಳಿದರೆ ಮನೆಯವರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದರಿಂದ ಬಾಯ್ಬಿಟ್ಟಿರಲಿಲ್ಲ ಎಂದು ಹೇಳಿದ್ದು, ಬಳಿಕ ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದು, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿ ಸುಮಂತ ಪೂಜಾರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.