ಮಂಗಳೂರು ಅ6: ಕರ್ನಾಟದಲ್ಲಿ ಐಸಿಸ್ ಕಾರ್ಯಚರಿಸುತ್ತಿದೆ ಎಂದು ಸಮರ್ಥಿಸುವ ಅಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅದ ಬಗ್ಗೆ ಪೋಲಿಸ್ ವಿಚಾರಣೆ ಆರಂಭಗೊಂಡಿದೆ.
ವಿಚಾರಣೆಯ ಆರಂಭಿಕ ಹಂತವಾಗಿ ಅಡಿಯೋ ಕ್ಲಿಪ್ಪಿನಲ್ಲಿ ಅಡಕವಾಗಿರುವ ಮಾತುಗಳನ್ನು ಆಡಿದ ಸೌತ್ ಕರ್ನಾಟಕ ಸಲಫಿ ಸಂಘಟನೆಯ ಉಪಾಧ್ಯಕ್ಷರಾದ ಇಸ್ಮಾಯಿಲ್ ಶಾಫಿಯವರಿಂದ ಪೋಲಿಸರು ಕೆಲವು ಮಹತ್ವದ ವಿವರಗಳನ್ನು ಕಲೆಹಾಕಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. ಬಲ್ಲ ಅಗತ್ಯ ಬಿದ್ದಲ್ಲಿ ವಿಚಾರಣೆಗಾಗಿ ಪೋಲಿಸರು ಶಾಫಿಯವರನ್ನು ಮುಂದಿನ ದಿನಗಳಲ್ಲಿ ಪೋಲಿಸ್ ಕೇಂದ್ರಕ್ಕೆ ಹಾಜಾರಾಗುವಂತೆ ಸೂಚಿಸಲು ಸಾಧ್ಯವಿದೆ ಎಂದು ತಿಳಿದು ಬಂದಿದೆ. ಕೋಮು ಸೂಕ್ಶ್ಮತೆಯ ಸ್ವಭಾವವಿರುವ ಕಾರಣ ಪೋಲಿಸರು ಈ ಪ್ರಕರಣವನ್ನು ಅತ್ಯಂತ ರಹಸ್ಯವಾಗಿ ತನಿಖೆ ನಡೆಸುತ್ತಿದ್ದಾರೆ.
ಖಾಸಾಗಿ ಕಾರ್ಯಕ್ರಮವೊಂದರಲ್ಲಿ ಇಸ್ಮಾಯಿಲ್ ಶಾಫಿಯವರು ಜಿಲ್ಲೆಯಲ್ಲಿ ಹಾಗೂ ಕೇರಳದಲ್ಲಿ ಕೆಲ ಸಂಘಟನೆಗಳು ಯುವಕರನ್ನು ಐಸಿಸ್ ಸೇರಿಸಲು ಪರೋಕ್ಷವಾಗಿ ಕೆಲಸ ಮಾಡುತ್ತಿವೆ.ಈ ಬಗ್ಗೆ ಯುವಕರು ತುಂಬಾ ಜಾಗ್ರತರಾಗಿ ಇರಬೇಕು ಎಂದು ನುಡಿದಿದ್ದರು. ಬ್ಯಾರಿ ಭಾಷೆಯಲ್ಲಿದ್ದ ಈ ಮಾತುಗಳ ತುಣುಕು ಕಳೆದ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿ ವಿವಾದಕ್ಕೆ ಕಾರಣವಾಗಿತ್ತು.
ತಕ್ಷಣ ಎಚ್ಚೆತ್ತುಕೊಂಡ ಪೋಲಿಸರು ಶಾಫಿಯವರ ಮಾತುಗಳನ್ನು ಕನ್ನಡಕ್ಕೆ ಅನುವಾದಗೊಳಿಸಿ ತನಿಖೆಯನ್ನು ಆರಂಭಿಸಿದ್ದರು.