ಪುತ್ತೂರು, ಸೆ 24 (MSP): ಇಲ್ಲಿನ ಬಡಗನ್ನೂರು ಗ್ರಾಮದ ಡೆಂಬಾಳೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆ, ಆಶಾ ಕಾರ್ಯಕರ್ತೆ, ಕ್ಷೇತ್ರ ಕಾರ್ಯಕ್ಕೆ ಹೋಗಿದ್ದಾಗ ಕಾಮುಕ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಸೆ.20 ರ ಗುರುವಾರ ನಡೆದಿದ್ದು, ಆರೋಪಿಯನ್ನು ಪೊಲೀಸರು ಸೆ.24ರ ಭಾನುವಾರ ಬಂಧಿಸಿದ್ದಾರೆ.
ಬಡಗನ್ನೂರು ಗ್ರಾಮದ ಡೆಂಬಾಳೆ ನಿವಾಸಿ ಮುಹಮ್ಮದ್ ಕುಂಞಿ (68) ಬಂಧಿತ ಆರೋಪಿ. ಆರೋಪಿಯು ಸೆ.20ರಂದು ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯೆಯಾದ ಆಶಾ ಕಾರ್ಯಕರ್ತೆಯೊಬ್ಬರ ಕೈ ಎಳೆದು ಮಾನಭಂಗಕ್ಕೆ ಯತ್ನಿಸಿ ಪರಾರಿಯಾಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಬಡಗನ್ನೂರು ಗ್ರಾಮ ಪಂಚಾಯತ್ ತುರ್ತು ಸಭೆ ನಡೆಸಿ ಆಗ್ರಹಿಸಿತ್ತು. ಈ ಹಿನ್ನಲೆಯಲ್ಲಿ ಭಾನುವಾರ ರಾತ್ರಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಬಂಧಿಸಿ ನ್ಯಾಯಾಧೀಶದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಗ್ರಾಮ ಪಂಚಾಯತ್ ಸದಸ್ಯೆಯೂ , ಆಶಾ ಕಾರ್ಯಕರ್ತೆಯೂ ಆಗಿರುವ ಮಹಿಳೆ ಗ್ರಾಮದ ಪುಂಡಿಕಾಯಿ, ಕೊನೆತೋಟ ಪ್ರದೇಶದ ಮನೆಗಳಿಗೆ ಹಾಗೂ ಸಜಂಕಾಡಿ ಶಾಲೆ ಕುಕ್ಕಾಜೆ ಅಂಗನವಾಡಿ ಕೇಂದ್ರಕ್ಕೆ ಕರ್ತವ್ಯದ ನಿಮಿತ್ತ ಭೇಟಿ ನೀಡಿ ಹಿಂತಿರುಗುತ್ತಿದ್ದಾಗ ಡೆಂಬಾಳೆಯಲ್ಲಿ ನಿರ್ಜನ ಪ್ರದೇಶದ ಮುಹಮ್ಮದ್ ಕುಂಞಿ (68) ಎಂಬಾತ ತಡೆದು ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಸಂತ್ರಸ್ಥೆ ಮಹಿಳೆ ಆರೋಪಿಸಿದ್ದರು.