ಅಮೇಥಿ, ಸೆ 24(SM): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ತಮ್ಮ ಸ್ವಕ್ಷೇತ್ರ ಅಮೇಥಿಗೆ ತೆರಳಿರುವ ರಾಹುಲ್ ಗಾಂಧಿ ರಫೆಲ್ ಹಾಗೂ ಮೋದಿಯ ವಿರುದ್ಧ ಗುಡುಗಿದ್ದಾರೆ. ರಫೇಲ್ ಯುದ್ಧ ವಿಮಾನವನ್ನೇ ಮತ್ತೆ ಅಸ್ತ್ರವಾಗಿ ರಾಹುಲ್ ಗಾಂಧಿಯವರು ಬಳಸಿಕೊಂಡಿದ್ದಾರೆ.
ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 'ಮೋದಿ ಅವರು ತಮ್ಮನ್ನು ತಾವು 'ಪ್ರಧಾನಿ ಅಲ್ಲ ದೇಶದ ಕಾವಲುಗಾರ ಎಂದಿದ್ದರು. ಆದರೆ ಕಾವಲುಗಾರನೇ ಕಳ್ಳತನ ಮಾಡಿದ್ದಾನೆ' ಎಂದು ಮತ್ತೊಮ್ಮೆ ಮೋದಿ ಅವರನ್ನು ಕಳ್ಳ ಎಂದು, ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಮೋದಿ ಅವರು ಫ್ರಾನ್ಸ್ಗೆ ಹೋಗಿ, ಅನಿಲ್ ಅಂಬಾನಿ ಅವರಿಗೆ ರಫೇಲ್ ಒಪ್ಪಂದ ನೀಡಿ ಎಂದು ಒತ್ತಾಯ ಮಾಡಿದ್ದಾರೆ' ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಎಚ್ಎಎಲ್ಗೆ ನೀಡಲಾಗಿದ್ದ ಒಪ್ಪಂದವನ್ನು ಅನಿಲ್ ಅಂಬಾನಿ ಒಡೆತನದ ಸಂಸ್ಥೆಗೆ ನೀಡಲಾಯಿತು. ರಿಲಯನ್ಸ್ ಹೆಸರನ್ನು ನಾನು ಸೂಚಿಸಿಲ್ಲ ಎಂದ ಫ್ರಾನ್ಸ್ ರಫೇಲ್ ಡೀಲ್ ಬಗ್ಗೆ ತೀವ್ರವಾಗಿ ಕೇಂದ್ರ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿರುವ ರಾಹುಲ್ ಗಾಂಧಿ ಅವರು, 'ಮೋದಿ ಅವರು ಫ್ರಾನ್ಸ್ಗೆ ಹೋಗಿ ಮಾಡಿದ್ದಾದರೂ ಏನು ಎಂದು ಹೇಳಲಿ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಸಾಕಷ್ಟು ಭಾಷಣ ಮಾಡುತ್ತಾರೆ. ಆದರೆ ರಫೇಲ್ ಬಗ್ಗೆ ಒಂದೂ ಮಾತಾಡುವುದಿಲ್ಲ. ಅಲ್ಲದೆ ಅವರೇ ನೇತೃತ್ವ ವಹಿಸಿ ಅನಿಲ್ ಅಂಬಾನಿ ಕೈಯಲ್ಲಿ ಕಳ್ಳತನ ಮಾಡಿಸಿದ್ದಾರೆ ಎಂದು ಅವರು ಪ್ರಹಾರ ನಡೆಸಿದ್ದಾರೆ.