ಕಾಸರಗೋಡು ಅ6: ವ್ಯಕ್ತಿಪಲ್ಲಟ ನಡೆಸಿ ಹೊಟ್ಟೆ ತುಂಬಾ ಆಹಾರ ಸೇವಿಸುತ್ತಿದ್ದ 75ರ ಹರೆಯದ ವೃದ್ಧನಿಗೆ ಬದಿಯಡ್ಕ ಪೊಲೀಸರು ತಾಕೀತು ನೀಡಿ ಗಡಿಪಾರು ಮಾಡಿದ್ದಾರೆ.
ಅಬ್ಬಾಸ್ ತಂಙಳ್ ಎಂಬುದಾಗಿ ತಿಳಿಸಿ ಸ್ವತಃ ಪರಿ ಚಯ ನಟಿಸಿ ಕಾಸರಗೋಡು, ಮುಳ್ಳೇ ರಿಯ, ಬದಿಯಡ್ಕ ಮುಂತಾದೆಡೆಗಳ ಮುಸ್ಲಿಮರ ಮನೆಗಳಿಗೆ ತೆರಳಿ ಈತ ಹಣ ಸಂಪಾದಿಸಿ ಹೊಟ್ಟೆ ತುಂಬಿಸು ತ್ತಿದ್ದನು. ಇಂದು ಬೆಳಿಗ್ಗೆ ಬದಿಯ ಡ್ಕದಲ್ಲಿ ಈತನ ಮೇಲೆ ಸಂಶಯ ಗೊಂಡ ಕೆಲ ಯುವಕರು ಈತನನ್ನು ಸ್ಠಳೀಯ ಪೊಲೀಸರಿಗೆ ಒಪ್ಪಿಸಿದ್ದರು. ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ಈತ ಎರ್ನಾಕುಳಂ ಜಿಲ್ಲೆಯ ಅಂಗಮಾಲಿ ನಿವಾಸಿ ವರ್ಗೀಸ್ ಎಂಬಾತನಾ ಗಿದ್ದಾ ನೆಂದು ತಿಳಿದುಬಂತು. ಬಳಿಕ ಈತನಿಗೆ ತಾಕೀತು ನೀಡಿ ಬಿಡಲಾ ಯಿತು. ಇತ್ತೀಚೆಗೆ ಆದೂರಿನಲ್ಲೂ ಈತ ಇದೇ ರೀತಿ ವಂಚನೆ ನಡೆಸುತ್ತಿದ್ದಾಗ ಸಂಶಯಗೊಂಡ ಸ್ಥಳೀಯರು ತಾಕೀತು ನೀಡಿ ಬಿಟ್ಟರೆನ್ನಲಾಗಿದೆ.