ಬೆಂಗಳೂರು ಅ6 : ವಿವಾದಾತ್ಮಕ ಎತ್ತಿನ ಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಶ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್.ಜಿ.ಟಿ ) ದಿಂದ ಆನುಮತಿ ಪಡೆಯುವಲ್ಲಿ ರಾಜ್ಯ ಸರ್ಕಾರವು ಯಶಸ್ವಿಯಾಗಿದೆ.
ಈ ಬಗ್ಗೆ ಪತ್ರಕಾರರೊಂದಿಗೆ ಮಾತನಾಡಿದ ವಿಶ್ವೇಶ್ವರಯ್ಯ ಜಲನಿಗಮದ ಅಡಳಿತ ನಿರ್ದೇಶಕರಾದ ಕೆ.ಜಯಪ್ರಕಾಶ್ " ಕಳೆದ ವರ್ಷ ಸಪ್ಟೆಂಬರ್ ತಿಂಗಳಲ್ಲಿ ಕೆ.ಎನ್ ಸೋಮಶೇಖರ್ ಎಂಬವರು 13,000 ಕೋಟಿ ರುಪಾಯಿ ವೆಚ್ಚದ ಎತ್ತಿನ ಹೊಳೆ ಯೋಜನೆಯ ವಿರುದ್ಧ ಎನ್.ಜಿ.ಟಿ ಗೆ ದೂರು ಕೊಟ್ಟಿದ್ದರು. ಅದರೆ ಸರಕಾರವು ಎನ್.ಜಿ.ಟಿ ಯ ಮುಂದೆ ಸಮರ್ಥವಾದ ವಾದವನ್ನು ಮಂಡಿಸಿ ಮಹತ್ವಾಕಾಂಕ್ಷಿ ಯೋಜನೆಗೆ ಅನುಮತಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದರಿಂದಾಗಿ ಯೋಜನೆಯ ಮೊದಲ ಹಂತದ ಕಾಮಗಾರಿಗಿದ್ದ ಎಲ್ಲಾ ಅಡೆತಡೆಗಳು ನಿವಾರಣೆಗೊಂಡಿವೆ" ಎಂದು ತಿಳಿಸಿದ್ದಾರೆ.
ಮುಂದುವರೆಸಿ ಅವರು "ಚಿಕ್ಕ ಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿನ ತೀವ್ರವಾದ ಕುಡಿಯುವ ನೀರಿನ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಎತ್ತಿನ ಹೊಳೆ ಯೋಜನೆಯ ರೂಪುರೇಷೆಗಳನ್ನು ತಯಾರಿಸಲಾಗಿದೆ. ಎಲ್ಲಿಯೂ ಕೃಷಿ ನೀರಿಗಾಗಿ ಈ ಯೋಜನೆಯನ್ನು ಜೋಡಿಸಲಾಗುತ್ತಿಲ್ಲ ಎಂಬ ವಾದವನ್ನು ಪುರಸ್ಕರಿಸಿ ಯೋಜನೆಗೆ ಎನ್.ಜಿ.ಟಿ ಶರತ್ತುಬದ್ಧ ಅನುಮತಿ ನೀಡಿದೆ." ಎಂದು ಹೇಳಿದ್ದಾರೆ
ಎತ್ತಿನ ಹೊಳೆ ಯೋಜನೆಯ ಭಾಗವಾಗಿ ನೇತ್ರಾವತಿ ತಿರುವು ಪ್ರಕ್ರಿಯೆಗೆ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳೊಂದಿಗೆ ,ವಿವಿಧ ರಾಜಕೀಯ ಪಕ್ಷಗಳು ಹಾಗೂ ಪರಿಸರವಾದಿಗಳು ಸೇರಿದಂತೆ ಹಲಾವಾರು ಸಾಮಾಜಿಕ ಹೋರಾಟಗಾರರು ತೀವ್ರವಾದ ಪ್ರತಿಭಟನೆ ನಡೆಸಿದ್ದರು