ಮಂಗಳೂರು ಅ6:ದಿನಗಳ ಹಿಂದೆ ನಡೆದ ಮುಕ್ಕಚ್ಚೇರಿಯಲ್ಲಿ ನಡೆದ ಜುಬೈರ್ ಹತ್ಯೆಯನ್ನು ಖಂಡಿಸಿ ಮುಕ್ಕಚ್ಚೇರಿಯಲ್ಲಿ ನೆರೆತಿದ್ದ ಪ್ರತಿಭಟನಾಕಾರರು ಅಹಾರ ಹಾಗೂ ಸಾರ್ವಜಣಿಕ ಸರಬರಾಜು ಸಚಿವ ಯು.ಟಿ ಖಾದರ್ ರವರ ಕಾರಿಗೆ ಕಲ್ಲೆಸೆದ ಘಟನೆ ನಡೆದಿದೆ.
ಅಕ್ಟೋಬರ್ 4ರಂದು ಮುಕ್ಕಚ್ಚೇರಿಯಲ್ಲಿ ದುಶ್ಕರ್ಮಿಗಳು ಸ್ಥಳೀಯ ಜುಬೈರ್ ಎಂಬಾತನ ಮೇಲೆ ತಲವಾರು ಧಾಳಿ ನಡೆಸಿ ಕೊಚ್ಚಿ ಕೊಲೆಗೈದಿದ್ದರು. ಜುಬೈರ್ ಹತ್ಯೆಯನ್ನು ಖಂಡಿಸಿ ಇಂದು ಸಂಜೆ ಬಿಜೆಪಿ ತೊಕ್ಕೊಟ್ಟು ಜಂಕ್ಷನಿನಲ್ಲಿ ಬ್ರಹತ್ ಪ್ರತಿಭಟನಾ ಸಭೆಯನ್ನು ಅಯೋಜಿಸಿತ್ತು. ಇದೇ ವೇಳೆ ಡೆಮೋಕ್ರೆಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ ಐ)ಮುಕ್ಕಚ್ಚೇರಿಯಲ್ಲಿ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಸ್ಥಳೀಯ ಶಾಸಕ ಹಾಗೂ ಸಚಿವರಾದ ಖಾದರ್ ರವರ ವಿರುದ್ಧ ಪ್ರತಿಭಟನಾಕಾರರು ಅಕ್ರೋಷಿತರಾಗಿ ಘೋಷಣೆಗಳನ್ನು ಕೂಗುತ್ತಿದ್ದಂತೆ ಅದೇ ದಾರಿಯಾಗಿ ಮಂಗಳೂರಿನ ಕಾರ್ಯಕ್ರಮವೊಂದಕ್ಕೆ ತೆರಳಲು ಸಚಿವರು ಆಗಮಿಸಿದರು.ಸಚಿವರನ್ನು ನೋಡಿದ ತಕ್ಷಣ ಅವರ ರಾಜಿನಾಮೆ ಆಗ್ರಹಿಸಿ ಕಾರಿನ ಮೇಲೆ ಮುಗಿಬಿದ್ದ ಪ್ರತಿಭಟನಾಕಾರರು ಸಚಿವರನ್ನು ತಡೆಹಿಡಿದರು. ಈ ಮಧ್ಯೆ ಗುಂಪಿನಿಂದ ಕಾರಿನತ್ತ ಕಲ್ಲುತೂರಾಟ ನಡೆಯಿತು.
ಕಲ್ಲುತೂರಟದಿಂದ ಕಾರಿಗೆ ಹಾನಿಯುಂಟಾದ ಕಾರಣ ಸಚಿವರು ಸ್ಥಳೀಯ ವೆಕ್ತಿಯೋರ್ವರ ಖಾಸಾಗಿ ವಾಹನದಲ್ಲಿ ತಮ್ಮ ನಿಗದಿತ ಕಾರ್ಯಕ್ರಮಕ್ಕೆ ತೆರಳಿದರು.