ಕಾರ್ಕಳ ಅ 6 : ಅಕ್ರಮವಾಗಿ ಸ್ಪೋಟಕ ಪರಿಕರಗಳನ್ನು ಸಾಗಾಟ ಮಾಡುತ್ತಿದ್ದ ಜಾಲವನ್ನು ಎಎಸ್ಪಿ ಹೃಷಿಕೇಶ್ ನೇತೃತ್ವದ ತಂಡವು ಪುಲ್ಕೇರಿ ಪತ್ತೆಹಚ್ಚಿದ್ದಾರೆ.
ಬೆಂಗಳೂರು ಬೆತ್ತಹಲಸೂರು ಕಡಿಗನ ಹಳ್ಳಿಯ ಗೋಪಿ.ಬಿ(48), ಕಾರ್ಕಳ ಕರಿಯಕಲ್ಲು ನಿವಾಸಿ ತ್ರಿಮೂರ್ತಿ(48) ಎಂಬವರು ಪ್ರಕರಣದ ಆರೋಪಿತರು.
ಆರೋಪಿತರು ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ, ಖಚಿತ ಮಾಹಿತಿಯನ್ವಯ ಪೊಲೀಸರು ಈ ಕಾರ್ಯಚರಣೆ ನಡೆಸಿದ್ದಾರೆ.25 ಸಾವಿರ ಮೌಲ್ಯದ ಸೊತ್ತನ್ನು ವಶಪಡಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಎಮ್ ಪಾಟೀಲ್ ಮಾರ್ಗದರ್ಶನದಂತೆ ಕಾರ್ಯಚರಣೆ ನಡೆದಿದೆ. ವೃತ್ತ ನಿರೀಕ್ಷಕ ಜಾಯ್ ಅಂತೋನಿ, ಯಸ್ ಐ ಸಂಕಪ್ಪ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ.