ಬಂಟ್ವಾಳ,ಸೆ 30 (MSP): ಕರ್ನಾಟಕ ಸರಕಾರ ಗ್ರಾಮ ಪಂಚಾಯತ್ ಗಳ ವಾರ್ಷಿಕ ಪ್ರಗತಿಯನ್ನಾಧರಿಸಿ ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕ ಗಳ ಆಧಾರದ ಮೇಲೆ ಕೊಡುವ 2017-18 ನೇ ಸಾಲಿನ " ಗಾಂಧಿ ಗ್ರಾಮ " ಪುರಸ್ಕಾರ ಕ್ಕೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.
ರಾಜ್ಯದ 30 ಜಿಲ್ಲೆಗಳ 176 ತಾಲೂಕುಗಳಲ್ಲಿ ತಲಾ ಮೂರು ಗ್ರಾಮ ಪಂಚಾಯತ್ ಗಳನ್ನು ಆಯ್ಕೆ ಮಾಡಿ ಅವುಗಳಲ್ಲಿ ಒಂದು ಗ್ರಾಮ ಪಂಚಾಯತ್ ನ್ನು ಪ್ರಶಸ್ತಿ ಗೆ ಅಂತಿಮಗೊಳಿಸುವ ಪದ್ದತಿ. ಈ ಬಾರಿಯೂ ಬಂಟ್ವಾಳ ತಾಲೂಕಿನ ಕೊಳ್ನಾಡು, ಇರಾ ಮತ್ತು ಬಾಳ್ತಿಲ ಗ್ರಾಮ ಪಂಚಾಯತ್ ಗಳು ಆಯ್ಕೆಯಾಗಿ ಮಾನದಂಡದಂತೆ ಅಂತಿಮವಾಗಿ 150 ಅಂಕಗಳ ಪ್ರಶ್ನಾಂಕಗಳ ಆಧಾರದ ಮೇಲೆ ಬಾಳ್ತಿಲ ಗ್ರಾಮ ಪಂಚಾಯತ್ ಪ್ರಶಸ್ತಿ ಪಡೆದಿದೆ. ಈ ವರ್ಷದಲ್ಲಿ ಪಂಚಾಯತ್ ಕೈಕೊಂಡ ಅಭಿವೃದ್ಧಿ ಕಾರ್ಯ ಹಾಗೂ ಅನುದಾನ ಬಳಕೆಗೆ ಸಂದ ಗೌರವ. 2017-18 ರಲ್ಲಿ ಎಸ್. ಸಿ.ಎಸ್.ಟಿ. ಅನುದಾನವನ್ನು ಆದ್ಯತೆಯ ನೆಲೆಯಲ್ಲಿ ಅತೀ ಹೆಚ್ಚು ಬಳಕೆ ಮಾಡಲಾಗಿದೆ, ಶೇ 100 ಶೌಚಾಲಯ ,ಗ್ರಾಮದಲ್ಲಿ ಅನಿಲ ವಿತರಣೆ, ಅನುದಾನ ಬಳಕೆ ಹಾಗೂ ಸ್ವಚ್ಚತೆಯಲ್ಲಿ ವಿಶೇಷ ವಾದ ಸಾಧನೆಗೈದ ಬಾಳ್ತಿಲ ಪಂಚಾಯತ್ ಅರ್ಹವಾಗಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಅಕ್ಟೋಬರ್ 2 ರ ಗಾಂಧೀ ಜಯಂತಿಯಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಈ ಪುರಸ್ಕಾರ ಪ್ರಧಾನವಾಗಲಿದ್ದು ಆ ದಿನ ಗ್ರಾಮ ಪಂಚಾಯತ್ ಅದ್ಯಕ್ಷ ರು ಮತ್ತು ಅಭಿವೃದ್ಧಿ ಅಧಿಕಾರಿಗಳು ಪುರಸ್ಕಾರ ಪಡೆಯಲಿದ್ದಾರೆ.
ಪುರಸ್ಕಾರ ಖುಷಿ ತಂದಿದೆ: " ಗಾಂಧಿ ಗ್ರಾಮ ಪುರಸ್ಕಾರ " ಪಡೆದಿರುವುದಕ್ಕೆ ಖುಷಿಯಾಗಿದೆ . ಪಂಚಾಯತ್ ವ್ಯವಸ್ಥೆ ಜಾರಿಯಾಗಿನಿಂದ , ನಮ್ಮ ಗ್ರಾಮ ಪಂಚಾಯತ್ ನಲ್ಲಿ ಸೇವೆ ಸಲ್ಲಿಸಿರುವ ಎಲ್ಲಾ ಜನಪ್ರತಿನಿಧಿಗಳ ಸಿಬ್ಬಂದಿಗಳ ಶ್ರಮ ಹಾಗೂ ತಾ.ಪಂ.ಜಿ.ಪಂ.ಮತ್ತು ಇಲಾಖೆ ಗಳ ಮೇಲಸ್ತರದ ಜನಪ್ರತಿನಿಧಿಗಳ ಸಹಕಾರವೇ ಇದಕ್ಕೆ ಕಾರಣವಾಗಿದ್ದು , ಬಾಳ್ತಿಲ ಗ್ರಾಮದ ಸಮಸ್ತ ನಾಗರಿಕರಿಗೆ ಸಂದ ಗೌರವವಾಗಿದೆ. ಈ ಪ್ರಶಸ್ತಿ ಮುಂದಿನ ಜನಪರ ಕಾರ್ಯಗಳಿಗೆ ಸ್ಪೂರ್ತಿ ಎಂದು ಗ್ರಾಮ ಪಂಚಾಯತ್ ಅದ್ಯಕ್ಷ ವಿಠಲ ತಿಳಿಸಿದ್ದಾರೆ.