ಮಂಗಳೂರು, ಅ 7: ಕೇಂದ್ರ ಸರಕಾರದ ಜಾರಿ ನಿರ್ದೇಶನಾಲಯದ ಸಹಾಯಕ ಆಯುಕ್ತರಾಗಿ ಮಂಗಳೂರಿನ ಅಪರಾಧ ಮತ್ತು ಸಂಚಾರ ವ್ಯವಸ್ಥೆಯ ಡಿಸಿಪಿಯಾಗಿದ್ದ ಹನುಮಂತರಾಯ ಅವರು ನೇಮಕಗೊಂಡಿದ್ದಾರೆ.
ಮಂಗಳೂರಿನಲ್ಲಿ ಡಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ಹನುಮಂತರಾಯ ಅವರನ್ನು ರಾಜ್ಯ ಸರಕಾರದ ಸೇವೆಯಿಂದ ಬಿಡುಗಡೆಗೊಳಿಸಿ ಕೂಡಲೇ ಕೇಂದ್ರ ಸರಕಾರದ ಸೇವೆಗೆ ವರದಿ ಮಾಡುವಂತೆ ಆದೇಶ ಮಾಡಲಾಗಿದೆ.
2017 ಜೂನ್ 8 ರಂದು ಮಂಗಳೂರಿನಲ್ಲಿ ಅಪರಾಧ ಮತ್ತು ಸಂಚಾರ ವ್ಯವಸ್ಥೆಯ ಡಿಸಿಪಿಯಾಗಿ ಹನುಮಂತರಾಯ ಅವರು ಅಧಿಕಾರ ಸ್ವೀಕರಿಸಿದ್ದರು.