ಕಡಬ, ಅ 1 (MSP): ಕರ್ತವ್ಯನಿರತ ಪೊಲೀಸರ ಮೇಲೆ ಇಬ್ಬರು ಪಾನಮತ್ತ ಸೈನಿಕರು ಹಾಗೂ ಅವರ ತಂಡ ಹಲ್ಲೆ ನಡೆಸಿ ಪೊಲೀಸ್ ವಾಹನಕ್ಕೆ ಹಾನಿಗೈದ ಘಟನೆ ಸೆ.30 ರ ಭಾನುವಾರ ರಾತ್ರಿ ಸುಬ್ರಹ್ಮಣ್ಯ - ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಚಾಕೋಟೆಕೆರೆ ಎಂಬಲ್ಲಿ ನಡೆದಿದೆ.
ಶ್ರೀ ಶೈಲ
ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಮಧ್ಯಪಾನ ಮಾಡಿ ಬೈಕಿನಲ್ಲಿ ಹೆಲ್ಮಟ್ ಧರಿಸದೆ ಬಂದ ಸೈನಿಕರಾದ ಹರೀಶ್ ಹಾಗೂ ರತ್ನಾಕರ್ ಅವರನ್ನು ಪೊಲೀಸರು ತಡೆದು ನಿಲ್ಲಿಸಿದಾಗ ಆಕ್ರೋಶಗೊಂಡ, ಆರೋಪಿಗಳು ’ನಮ್ಮನ್ನು ತಡೆಯಲು ನೀವು ಯಾರು ’? ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಲ್ಲದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ . ಪೊಲೀಸರು ಇದನ್ನು ವಿರೋಧಿಸಿದಾಗ ಅವರ ಸ್ನೇಹಿತರಾದ ದಿನೇಶ, ಪ್ರಶಾಂತ್ ಮತ್ತಿತರರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳು ಪೊಲೀಸರ ಪೈಕಿ ಶ್ರೀ ಶೈಲ ಅವರ ತಲೆಗೆ ಗಾಯವಾಗಿದ್ದರೆ, ಪುಟ್ಟಸ್ವಾಮಿ ಅವರ ಒಂದು ಹಲ್ಲು ಮುರಿದಿದೆ. ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದರು.
ಘಟನೆಯಲ್ಲಿ ಆರೋಪಿಗಳು ಮದ್ಯಪಾನ ತಪಾಸಣೆಯ ಸಲಕರಣೆಯನ್ನು ಧ್ವಂಸಗೊಳಿಸಿದ್ದು. ಗಾಯಾಳು ಪೊಲೀಸರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಲ್ಲಿ ರತ್ನಾಕರ ಹಾಗೂ ಹರೀಶ್ ಎಂಬವರು ಸೈನಿಕರಾಗಿದ್ದು, ರಜೆಯ ನಿಮಿತ್ತ ಊರಿಗೆ ಆಗಮಿಸಿದ್ದರೆನ್ನಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.