ಮಂಗಳೂರು, ಅ 1 (MSP): ವಿಶ್ವೇಶ್ವರಯ್ಯ ಟೆಕ್ನಾನಲಾಜಿಕಲ್ ಯುನಿವರ್ಸಿಟಿ ವತಿಯಿಂದ ನಗರದ ಅಡ್ಯಾರ್ ನ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ಇಂಟರ್ ಕಾಲೇಜ್ ಪವರ್ ಲಿಫ್ಟಿಂಗ್ ಸ್ಪರ್ಧೆಯ 52 ಕೆ.ಜಿ ವಿಭಾಗದ ಸ್ವರ್ಧೆಯಲ್ಲಿ ಕೆದಿಲದ ದೀಕ್ಷಾ ಗೌಡರವರು ಪ್ರಥಮ ಸ್ಥಾನ ಪಡೆದು ಫೆಬ್ರವರಿಯಲ್ಲಿ ಕ್ಯಾಲಿಕಟ್ ನಲ್ಲಿ ನಡೆಯಲಿರುವ ಆಲ್ ಇಂಡಿಯಾ ನ್ಯಾಷನಲ್ ಪವರ್ ಲಿಫ್ಟಿಂಗ್ ಸ್ವರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

ಇವರು ಕೆದಿಲ ಗ್ರಾಮದ ಪೇರಮೋಗ್ರು ಆನಂದ ಗೌಡ ಮತ್ತು ಯಶೋದಾ ದಂಪತಿಯ ಪುತ್ರಿಯಾಗಿದ್ದು ಅಡ್ಯಾರ್ ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಬಿ.ಎ ವಿದ್ಯಾರ್ಥಿಯಾಗಿರುವ ದೀಕ್ಷಾ ಗೌಡ ತನ್ನ ಪ್ರಾರ್ಥಮಿಕ ಶಿಕ್ಷಣವನ್ನು ಗಡಿಯಾರ ಹಿ.ಪ್ರಾ.ಶಾಲೆ ಕಡೇಶ್ವಾಲ್ಯದಲ್ಲಿ ಹಾಗೂ ಸರಕಾರಿ ಪ್ರೌಢಶಾಲೆ ಪುತ್ತೂರುನಲ್ಲಿ ಪಡೆದಿದ್ದಾರೆ. ಅಲ್ಲದೆ ಇವರು ವಿವೇಕಾನಂದ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದಾರೆ