ಸುರತ್ಕಲ್, ಅ 02(MSP): ಸಮುದ್ರ ತೀರದಲ್ಲಿ ಆಡವಾಡುತ್ತಿದ್ದ ಸಂದರ್ಭ ಬಿಜೆಪಿ ಕಾರ್ಯಕರ್ತ ಶಿವನಾಂದ (31) ಎಂಬವರಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಇಡ್ಯಾ ಬಳಿ ಸೆ. 30ರ ಭಾನುವಾರ ನಡೆದಿದೆ.
ಗುಡ್ಡಕೊಪ್ಲ ಸಮುದ್ರ ತೀರದಲ್ಲಿ ಶಿವನಾಂದ ಹಾಗೂ ಅವರ ಸ್ನೇಹಿತರು ಲಗೋರಿ ಆಡುತ್ತಿದ್ದಾಗ ಸುಮಾರು ಹದಿನೈದು ಮಂದಿಯ ತಂಡ ಬಾಲ್ ಹೆಕ್ಕುವ ವಿಚಾರದಲ್ಲಿ ವಾಗ್ವಾದ ಉಂಟಾಗಿ ಶಿವಾನಂದ್ ಮೇಲೆ ಹಿತೇಶ್ ಭರತ್ ಕಾರ್ತೇಶ್, ರೂಪೇಶ್ , ಶರತ್, ಸಾಗರ್ ಮತ್ತಿತರರು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಸಮೀಪದಲ್ಲೇ ಇದ್ದ ಮನೆಗೆ ಹೋದರೂ ಅಲ್ಲಿಗೂ ಬಂದ ತಂಡ ಕಾಲಿನ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳು ಶಿವಾನಂದ ಅವರನ್ನು ಸುರತ್ಕಲ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.