ಬೆಂಗಳೂರು, ಅ 02(MSP): ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು , ಶಾಸಕರೊಂದಿಗೆ ಸಿಎಂ ಕುಮಾರಸ್ವಾಮಿ ಅ 01 ರ ಸೋಮವಾರ ಸಭೆ ನಡೆಸಿದರು.
ಈ ಸಭೆಯಲ್ಲಿ ಕಾವೇರಿಕೊಳ್ಳದಡಿ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬಾಕಿಯಿರುವ ನೀರಾವರಿ ಯೋಜನೆಗಳಿಗೆ ಆದ್ಯತಾನುಸಾರ ಹಣಕಾಸು ನೆರವು ನೀಡಲು ತೀರ್ಮಾನ ಕೈಗೊಳ್ಳಲಾಯಿತು. ಅಲ್ಲದೆ ಕೃಷ್ಣರಾಜ ಸಾಗರದಿಂದ ಕೃಷಿ ಭೂಮಿಗೆ ನೀರು ಪೂರೈಸುವುದು ವಿಸಿ ನಾಲೆಯ ಅಭಿವೃದ್ದಿ ಪಡಿಸುವುದು ಸೇರಿದಂತೆ ಹೇಮಾವತಿ ಅಚ್ಚುಕಟ್ಟು ಪ್ರದೇಶದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳು ಇದರಲ್ಲಿ ಸೇರಿವೆ. ಮಳವಳ್ಳಿ ನಾಲೆಯ ಆಧುನೀಕರಣ, ಮದ್ದೂರು ಏತ ನೀರಾವರಿ , ನಾಗಮಂಗಲಕ್ಕೆ ನೀರು ಪೂರೈಸುವುದು ಈ ಯೋಜನೆಯಲ್ಲಿ ಒಳಗೊಂಡಿದೆ.
ಈ ಭಾಗದ ಕೆರೆಗಳ ಹೊಳೆತ್ತಿ ಬೆಂಗಳೂರು- ಬಂಟ್ವಾಳ, ಬೆಂಗಳೂರು ಮೈಸೂರು ರಸ್ತೆಗಳ ಕಾಮಗಾರಿಯಲ್ಲಿ ಅದನ್ನು ಬಳಸಿಕೊಳ್ಳಲು ತೀರ್ಮಾನಿಸಲಾಯಿತು. ಕಾವೇರಿಕೊಳ್ಳದ ಯಾವುದೇ ಯೋಜನೆ ಬಾಕಿ ಉಳಿಸಿಕೊಳ್ಳಲಾಗುವುದಿಲ್ಲ. ಹಣಕಾಸಿ ಲಭ್ಯತೆ ಆಧಾರಿಸಿ ಹಂತ ಹಂತವಾಗಿ ಕಾಮಗಾರಿ ಪೂರೈಸಲು ತೀರ್ಮಾನಿಸಿಲಾಯಿತು. ಈ ಸಭೆಗೂ ಮುಂಚೆ ಮಂಡ್ಯ ಜಿಲ್ಲೆಯ ಶಾಸಕರೊಂದಿಗೆ ಸಚಿವ ಡಿಕೆಶಿ ಪೂರ್ವಭಾವಿ ಸಭೆ ನಡೆಸಿದರು.