ಉಡುಪಿ, ಅ 03 (MSP): ಹೆಜಮಾಡಿಯ ಪೊಲೀಸ್ ಇನ್ಸ್ ಪೆಕ್ಟರ್ ಹರಿಶ್ಚಂದ್ರ ಕೆ.ಪಿ ಹೃದಯಾಘಾತದಿಂದ ಅ.03 ರ ಬುಧವಾರ ಮುಂಜಾನೆ ೭ ಗಂಟೆಗೆ ವಿಧಿವಶರಾಗಿದ್ದಾರೆ.
ಮೂಲ್ಕಿ ಸಮೀಪದ ಬಾಡಿಗ್ವೆ ಮನೆಯಲ್ಲಿ ವಾಸವಾಗಿದ್ದ ಅವರಿಗೆ ಇಂದು ಮುಂಜಾನೆ ಎದೆಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಮುಕ್ಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಅದಾಗಲೇ ಸಾವನಪ್ಪಿರುವುದನು ಸ್ಪಷ್ಟಪಡಿಸಿದ್ದಾರೆ. ೫೪ ವರ್ಷದ ಹರಿಶ್ಚಂದ್ರ ಕೆ.ಪಿ ಅವರು ಮಡದಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. ಈ ಹಿಂದೆ ಇವರು ಮಡಿಕೇರಿಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ವಿಟ್ಲ ಮತ್ತು ಬಂಟ್ವಾಳ ಠಾಣೆಯಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ.