ಕೇರಳ, ಅ 03 (MSP):ಒಂದೆಡೆ ಶಬರಿಮಲೆಗೆ ಮಹಿಳೆಯರು ಪ್ರವೇಶಾವಕಾಶದ ಸುಪ್ರೀಂ ತೀರ್ಪನ್ನು ವಿರೋಧಿಸಿ ಕೇರಳದಾದ್ಯಂತ ಸಾವಿರಾರು ಜನರು ಬೀದಿಗಿಳಿದು ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ರೆ..ಇತ್ತ ಕಡೆ ಸಾಮಾಜಿಕ ಜಾಲತಾಣದಲ್ಲೂ ಸುಪ್ರೀಂ ತೀರ್ಪನ್ನು ವಿರೋಧಿಸಿ #ReadyToWait ಎನ್ನುವ ಚಳುವಳಿ ಪ್ರಾರಂಭವಾಗಿದೆ.
ಶಬರಿಮಲೆಯ ಪ್ರಾಚೀನ ಪರಂಪರೆಯನ್ನು ನಾಶಮಾಡಲು ಹೊರಟಿರುವ ವ್ಯವಸ್ಥೆ ಮತ್ತು ಕಾನೂನಿನ ವಿರುದ್ದ ಸಮರ ನಿರಂತರ ಎಂದು ಪ್ರತಿಭಟನಾಕಾರರು ಹೇಳಿದ್ರೆ, ಇತ್ತ ಕಡೆ ಆಂದೋಲನವನ್ನು ಬೆಂಬಲಿಸುತ್ತಿರುವ ಮಹಿಳಾ ನೆಟ್ಟಿಗರು ’ ನಾವು ನಮ್ಮ ಸಮಯಕ್ಕಾಗಿ ಕಾಯಲು ಸಿದ್ಧ ’ ಎಂದಿದ್ದಾರೆ.
#ReadyToWait ಆಂದೋಲನದಲ್ಲಿ ಭಾಗವಹಿಸುವವರ ಪ್ರಕಾರ ನಾವು ದೇವಾಲಯದ ಸಂಪ್ರದಾಯ ಮತ್ತು ಪರಂಪರೆಯನ್ನು ಗೌರವಿಸುತ್ತೇವೆ. ಹೀಗಾಗಿ ಮಹಿಳೆಯಾಗಿ 50 ವರ್ಷದವರೆಗೆ ಕಾಯಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. "ಕಾಯಲು ಸಿದ್ಧ " ಚಳುವಳಿ 2016ರಲ್ಲಿ ಪ್ರಾರಂಭವಾಗಿತ್ತು. ಇದೀಗ ಮತ್ತೆ ಚಾಲನೆಗೊಳಗಾಗಿದೆ.
ಇನ್ನು People Of Dharma ಎನ್ನುವ ಸಂಘಟನೆಯೊಂದು ತೀರ್ಪನ್ನು ಪ್ರಶ್ನಿಸಿ ಮತ್ತೆ ಕೋರ್ಟಿನ ಮೆಟ್ಟಿಲೇರಲಿದ್ದಾರೆ. ಮಹಿಳೆಯರಿಗೆ ದೇವಸ್ಥಾನದ ಒಳಗೆ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಇನ್ನೊಂದೆಡೆ ಇಂದು ನಡೆದ ಸಾವಿರಾರು ಜನರ ಪ್ರತಿಭಟನೆಗೆ ಪಂದಳಂ ರಾಜಮನೆತನ ಕೂಡಾ ಬೆಂಬಲ ವ್ಯಕ್ತಪಡಿಸಿದ್ದು, ಶೀಘ್ರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ