ಮಂಗಳೂರು, ಅ 8: ಡಾ. ಕಾರಂತ ಹುಟ್ಟೂರ ಪ್ರಶಸ್ತಿಯಲ್ಲಿ ಎದ್ದ ವಿವಾದಗಳು ತಣ್ಣಗಾಗುವಂತೆ ಕಾಣುತ್ತಿಲ್ಲ.ಈ ಎಲ್ಲಾ ಗೊಂದಲಗಳ ನಡುವೆ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಆಯ್ಕೆ ಸಮಿತಿಯಲ್ಲಿ ನಾನಿಲ್ಲ, ಪ್ರಶಸ್ತಿಯನ್ನು ಘೋಷಿಸಿದ್ದೂ ನಾನಾಲ್ಲ ಎಂದು ಉಡುಪಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈ ನಡುವೆ ಕೋಟ ಶಿವರಾಮ ಕಾರಂತ ಟ್ರಸ್ಟ್ ಹಾಗೂ ಕೋಟಬೆಟ್ಟು ಗ್ರಾಮಪಂಚಾಯತ್ ನೀಡುವ ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಯನ್ನು ವಿರೋಧಗಳು ಎನೇ ಇದ್ದರೂ ಪ್ರಕಾಶ್ ರೈಗೆ ನೀಡುವುದಾಗಿ ಹೇಳಿದೆ. ಒಮ್ಮೆ ಘೋಷಣೆಯಾದ ಪ್ರಶಸ್ತಿಯನ್ನೂ ಯಾವ ಕಾರಣಕ್ಕಾಗಿಯೂ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕಾರಂತ ಟ್ರಸ್ಟ್ ತಿಳಿಸಿದೆ. ಈ ನಡುವೆ ನಟ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡುವ ಕುರಿತು ಪರ ವಿರೋಧ ಚರ್ಚೆಗಳು ಜೋರಾಗಿಯೇ ಮುಂದುವರಿದಿದೆ.