ಉಡುಪಿ, 04 ಅ (MSP) : ಕರಾವಳಿ ನಿಯಂತ್ರಣೇತರ ವಲಯ( ನಾನ್ ಸಿಆರ್ ಝಡ್) ದಲ್ಲಿ ಅಕ್ಟೋಬರ್ 15 ರೊಳಗೆ ಮರಳು ದಿಬ್ಬಗಳನ್ನು ಗುರುತಿಸಿ, ಅದನ್ನು ಮಾನವ ಶ್ರಮದ ಮೂಲಕ ತೆರವು ಮಾಡಲು (ಸಂಪ್ರದಾಯಿಕ ಮರಳುಗಾರಿಕೆ) ಅವಕಾಶ ನೀಡುವ ಕುರಿತಂತೆ ಕ್ರಮಕೈಗೊಳ್ಳಲಾಗುವುದು. ಆ ಮೂಲಕ ಜಿಲ್ಲೆಯಲ್ಲಿ ಉದ್ಭವಿಸಿರುವ ಮರಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಹೇಳಿದರು.
ಉಡುಪಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೆ.03 ಬುಧವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ಬಳಿಕ ನಡೆದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು. ನಾನ್ ಸಿಆರ್ ಝಡ್ ವಲಯದಲ್ಲಿ ಈಗಾಗಲೇ 3 ಮರಳು ದಿಬ್ಬಗಳನ್ನು ಗುರುತಿಸಲಾಗಿದೆ. ಇಲ್ಲಿ ತೆಗೆಯುವ ಮರಳನ್ನು ಸರ್ಕಾರದ ವಿವಿಧ ಯೋಜನೆಯಡಿ ನಿರ್ಮಾಣ ಮಾಡಲು ಬಾಕಿ ಇರುವ ಮನೆ, ಸ್ಥಗಿತಗೊಂಡಿರುವ ಮನೆ ಹಾಗೂ ಸರ್ಕಾರಿ ಕಟ್ಟಡಗಳ ಕಾಮಗಾರಿಗಳಿಗೆ ಮೊದಲ ಆದ್ಯತೆಯಲ್ಲಿ ಬಳಸಲಾಗುವುದು. ಇಲ್ಲಿ ತೆಗೆಯುವ ಮರಳಿಗೆ ಜಿಲ್ಲಾಡಳಿತವೇ ದರ ನಿಗದಿ ಮಾಡಲಿದೆ. ಹಾಗೆಯೇ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಿಡಿಒ ಮೂಲಕ ಬಾಕಿರುವ ಮನೆ, ಕಟ್ಟಡಗಳನ್ನು ಗುರುತಿಸಿ ಅದಕ್ಕೆ ಗ್ರಾ.ಪಂ. ಮೂಲಕ ಮರಳು ಹಂಚಿಕೆ ಮಾಡಲಾಗುವುದು ಎಂದರು.
ಕರಾವಳಿ ನಿಯಂತ್ರಣ ವಲಯ( ಸಿಆರ್ ಝಡ್) ದಲ್ಲಿ ಮರಳುಗಾರಿಕೆ ಸಂಬಂಧಿಸಿ ಅ. 5 ರೊಳಗೆ ಎನ್ ಐಟಿಕೆ ವರದಿ ಕೈ ಸೇರುವ ಸಾಧ್ಯತೆ ಇದ್ದು, ಆ ಬಳಿಕ ನಾನ್ ಸಿಆರ್ ಝಡ್ ಮರಳುಗಾರಿಕೆ ಕುರಿತಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಗುತ್ತಿದಾರರಿಗೆ ತಿಳಿಸಲಾಗಿದೆ. ಈಗಾಗಲೇ ಪೂರ್ಣಗೊಂಡಿರುವ ಸರ್ವಿಸ್ ರಸ್ತೆ ತೆರುವ ಮಾಡುವಂತೆ ಹಾಗೂ ರಸ್ತೆ ಸುರಕ್ಷತಾ ಫಲಕಗಳನ್ನು ಅಳವಡಿಸುವಂತೆಯೂ ಸೂಚಿಸಲಾಗಿದೆ. ಕರಾವಳಿ ಜಂಕ್ಷನ್ ಪ್ಲೈ ಓವರ್ ಸೇರಿದ್ದಂತೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ರಾ.ಹೆ. ಕಾಮಗಾರಿಗಳನ್ನು 2019ರ ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸುವ ಭರವಸೆಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೀಡಿದ್ದಾರೆ ಎಂದರು.
7598 ಪಡಿತರ ಕಾರ್ಡ್ ವಿಲೇವಾರಿಗೆ ಬಾಕಿಯಿದ್ದು, ಅವುಗಳನ್ನು ತ್ವರಿತವಾಗಿ ವಿಲೇವಾರಿಮಾಡುವಂತೆ ಸೂಚಿಸಲಾಗಿದೆ. ಜಿಲ್ಲೆಗೆ 11 ಅಂಬೇಡ್ಕರ್ ಭವನ ಮಂಜೂರಾಗಿದ್ದು, ಆ ಪೈಕಿ ೫ ಭವನಗಳಿಗೆ ಜಾಗ ಗುರುತಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು 9ಭವನಗಳಿಗೆ ಜಾಗ ಗುರುತಿಸುವ ಕಾರ್ಯವನ್ನು ಅ. 15ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ವಲಸೆ ಕಾರ್ಮಿಕರ ಮಕ್ಕಳಿಗೆ ಆರೋಗ್ಯದ ಜೊತೆಗೆ ಶಿಕ್ಷಣ ನೀಡುವ ಉದ್ದೇಶದಿಂದ ಸಂಚಾರಿ ಅಂಗನವಾಡಿಯನ್ನು ಜಾರಿಗೊಳಿಸಲಾಗಿದ್ದು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ ಐದು ಸಂಚಾರಿ ಅಂಗನವಾಡಿಗಳನ್ನು ಮಂಜೂರು ಮಾಡಲಾಗುವುದು. ಪ್ರಾಕೃತಿಕ ವಿಕೋಪದಿಂದ ಸುಮಾರು 7600ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ್ ರಾವ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಿಇಒ ಶಿವಾನಂದ ಕಾಪಶಿ ಇದ್ದರು.