ಮಂಗಳೂರು,ಅ 8 : ನಗರದಲ್ಲಿ ವಿದ್ಯಾರ್ಥಿಯೊಬ್ಬ ಶನಿವಾರ ಸಂಜೆ ,4 ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಬ್ಲೂ ವೇಲ್ ಆಟದ ಪ್ರಭಾವದ ಶಂಕೆ ಮೂಡಿದೆ. ಆಡುಮರೋಳಿಯಲ್ಲಿ ಈ ಘಟನೆ ನಡೆದಿದ್ದು 14 ವರ್ಷದ ಪ್ರಥಮ್ ಆತ್ಮಹತ್ಯೆಗೆ ಯತ್ನಿಸಿದ ಬಾಲಕನಾಗಿದ್ದಾನೆ.ಈತ ಉರ್ವ ಕೆನರಾ ಹೈಸ್ಕೂಲಿನ 9 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆತನ ಎರಡೂ ಕಾಲು ಮತ್ತು ಕೈಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾನೆ.
ಡೆತ್ ನೋಟ್ ಪತ್ತೆ:
ಕಟ್ಟಡದಿಂದ ಕೆಳಕ್ಕೆ ಹಾರುವುದಕ್ಕೆ ಮೊದಲು ಈತ ಬರೆದ ಡೆತ್ ನೋಟ್ ಟೇರೆಸ್ ನಲ್ಲಿ ಪತ್ತೆಯಾಗಿದ್ದು, "ಮೈ ಫಾದರ್, ಮದರ್ ಸಪೋರ್ಟ್ ಮಿ.ಐ ಆಮ್ ನಾಟ್ ಇಂಟರೆಸ್ಟ್ ಡ್ ಇನ್ ಸ್ಟಡಿ" ಎಂದು ಮೂರು ಬಾರಿ ಬರೆದಿದ್ದಾನೆ. ಸ್ಥಳಕ್ಕೆ ಕಂಕನಾಡಿ ಪೊಲೀಸರು ಭೇಟಿ ನೀಡಿ ಬ್ಲೂವೇಲ್ ಆಟದ ಪ್ರಭಾವಕ್ಕೆ ಒಳಗಾಗಿದ್ದಾನೆ ಎಂದು ಮೊಬೈಲ್ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.