ಕಾಸರಗೋಡು, ಅ 05(SM): ಕೇರಳದಲ್ಲಿ ಮದ್ಯ ತಯಾರಿಕಾ ಘಟಕಕ್ಕೆ ಅನುಮತಿ ನೀಡುವಲ್ಲಿ ಅವ್ಯವಹಾರ ನಡೆದಿದೆ. ಈ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಕಾಸರಗೋಡು ಅಬಕಾರಿ ಇಲಾಖಾ ಕಚೇರಿಗೆ ಶುಕ್ರವಾರದಂದು ಮುತ್ತಿಗೆ ಹಾಕಲಾಯಿತು.
ಯುವ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಬಕಾರಿ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಯಿತು. ಅಲ್ಲದೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಗಳು ಕೂಡ ಕೇಳಿ ಬಂದವು. ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿಯಿಂದ ಮೆರವಣಿಗೆ ಮೂಲಕ ತೆರಳಿದ ಕಾರ್ಯಕರ್ತರನ್ನು ಅಬಕಾರಿ ಕಚೇರಿ ಗೇಟ್ ಬಳಿ ಪೊಲೀಸರು ತಡೆದರು. ಈ ಸಂದರ್ಭ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.