ಕುವೈಟ್, ಅ06(SS): ಕುವೈಟ್ನಲ್ಲಿರುವ ಭಾರತೀಯರು ಎದುರಿಸುತ್ತಿರುವ ಸವಾಲು, ಸಂಕಷ್ಟಗಳ ಬಗ್ಗೆ ಶಾಸಕ ಡಿ ವೇದವ್ಯಾಸ ಕಾಮತ್ ಚರ್ಚಿಸಿದ್ದಾರೆ.
ಭಾರತೀಯ ಪ್ರವಾಸಿ ಪರಿಷದ್ ಆಯೋಜಿಸಿರುವ ಪ್ರವಾಸಿ ಮಹೋತ್ಸವ 2018ರ ಅಂಗವಾಗಿ ಕುವೈಟ್ ಪ್ರವಾಸದಲ್ಲಿರುವ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರೊಂದಿಗೆ ಕುವೈಟ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ತೆರಳಿ, ಬಳಿಕ ಭಾರತದ ರಾಯಭಾರಿ ಕೆ ಜೀವನ್ ಸಾಗರ್ ಜಿ ಅವರನ್ನು ಭೇಟಿ ಮಾಡಿದ್ದಾರೆ.
ಭಾರತದ ರಾಯಭಾರಿ ಕೆ ಜೀವನ್ ಸಾಗರ್ ಜಿ ಅವರಲ್ಲಿ ಕುವೈಟ್ನಲ್ಲಿ ಭಾರತೀಯರು ಎದುರಿಸುತ್ತಿರುವ ಸವಾಲು, ಸಂಕಷ್ಟಗಳ ಬಗ್ಗೆ ಚರ್ಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಾವು ಶೀಘ್ರದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಭರವಸೆ ನೀಡಿದ್ದಾರೆ. ಮಾತ್ರವಲ್ಲ, ಶಾಸಕ ವೇದವ್ಯಾಸ ಕಾಮತ್ ಅವರಲ್ಲಿ ಕುವೈಟ್ನಲ್ಲಿರುವ ಭಾರತೀಯರು ಎದುರಿಸುತ್ತಿರುವ ಸವಾಲು, ಸಂಕಷ್ಟಗಳನ್ನು ಪರಿಹರಿಸುವುದಾಗಿ ತಿಳಿಸಿದ್ದಾರೆ.