ಬೆಂಗಳೂರು, ಅ06(SS): ಇಲ್ಲಿನ ಸಂಜಯನಗರದಲ್ಲಿ ಇಸ್ಕಾನ್ ಆಯೋಜಿಸಿದ್ದ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆಯಲ್ಲಿ ಮುಸ್ಲಿಮ್ ಬಾಲಕನೋರ್ವ ಪ್ರಶಸ್ತಿ ಪಡೆದು ಅಚ್ಚರಿ ಮೂಡಿಸಿದ್ದಾನೆ.
ಸುಭಾಷ್ ಮೆಮೋರಿಯಲ್ ಇಂಗ್ಲಿಷ್ ಸ್ಕೂಲ್ನ 9ನೇ ತರಗತಿ ವಿದ್ಯಾರ್ಥಿ, 14 ವರ್ಷದ ಶೇಖ್ ಮೊಹಿಯುದ್ದೀನ್ ಭಗವದ್ಗೀತೆಗೆ ಸಂಬಂಧಿಸಿದ ಎಲ್ಲ 41 ಬಹು ಆಯ್ಕೆಯ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ ಮೊದಲ ಬಹುಮಾನ ಪಡೆದಿದ್ದಾನೆ. 14 ಶಾಲೆಗಳಿಂದ ಸುಮಾರು 400 ಮಂದಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಶೇಖ್ ಸಲಾಹುದ್ದೀನ್ ಮತ್ತು ಸಬಿಹಾ ಮಹಮ್ಮದ್ ಅವರ ಪುತ್ರನಾಗಿರುವ ಮೊಹಿಯುದ್ದೀನ್, 11 ವರ್ಷದವನಾಗಿದ್ದ ಸಂದರ್ಭದಲ್ಲಿ ಗೀತೆ ಮತ್ತು ಧಾರ್ಮಿಕ ವಿಚಾರಗಳ ಕುರಿತು ಜನರಲ್ ನಾಲೆಜ್ ಪುಸ್ತಕ ಓದಿ ತಿಳಿದುಕೊಂಡಿದ್ದ. ಪಾಲಕರಲ್ಲಿಯೂ ಗೀತೆ ಕುರಿತಾದ ವಿವಿಧ ಪ್ರಶ್ನೆ ಕೇಳಿ ಸಂದೇಹ ಬಗೆಹರಿಸಿಕೊಳ್ಳುತ್ತಿದ್ದ. ಈ ಬಾಲಕನಿಗೆ ತಾಯಿ ಭಗವದ್ಗೀತೆಯ ಪ್ರತಿ ತಂದುಕೊಟ್ಟಿದ್ದರು. ಆತನ ಅಜ್ಜಿ ಅಸಿಯಾ ಖಾನುಂ ಸಹಾಯದಿಂದ ಭಗವದ್ಗೀತೆ ಓದಿ ತಿಳಿದುಕೊಂಡಿದ್ದ.
ಇದೀಗ ಮುಸ್ಲಿಂ ಬಾಲನೋರ್ವ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣನಾಗಿದ್ದಾನೆ.