ಮಂಗಳೂರು, ಅ 7 (MSP): ಸ್ಮಾರ್ಟ್ ಸಿಟಿಯ ಅನುದಾನದಲ್ಲಿ 15 ಕೋಟಿ ರೂಪಾಯಿ ಹಣವನ್ನು ಕುದ್ರೋಳಿಯಲ್ಲಿರುವ ಕಸಾಯಿಖಾನೆಗೆ ಘೋಷಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ವಿರುದ್ದ ಸಾರ್ವಜನಿಕವಾಗಿ ವ್ಯಾಪಕ ಟೀಕೆಗಳು ಕೇಳಿ ಬರುತ್ತಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 15 ಕೋಟಿ ರೂಪಾಯಿಯ ಬೃಹತ್ ಮೊತ್ತದ ಅನುದಾನವನ್ನು ಪ್ರಾಣಿಗಳ ವಧೆ ಮಾಡುವ ಕಸಾಯಿಖಾನೆಗೆ ನೀಡುವ ಅಗತ್ಯವೇನು ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರಶ್ನಿಸಿ ಟೀಕೆ ಮಾಡಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಗೋಶಾಲೆಗಳಿಗೆ ಘೋಷಣೆಯಾದ ಅನುದಾನವೇ ಬಿಡುಗಡೆಯಾಗಿಲ್ಲ, ಹೀಗಿರುವಾಗ ಕೇವಲ ಒಂದು ಕಸಾಯಿಖಾನೆ ಅಭಿವೃದ್ಧಿಗೆ ೧೫ ಕೋಟಿ ಅನುದಾನ ಯಾಕೆ ಎನ್ನುವ ಪ್ರಶ್ನೆಯನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಹೈಜಿನ್ ಹಾಗೂ ಆಹಾರ ಶುಚಿಯಾಗಿರಬೇಕು ಅದಕ್ಕಾಗಿ ಕಸಾಯಿಖಾನೆಗೆ ೧೫ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎನ್ನುವ ಸಮರ್ಥನೆಯನ್ನು ಖಾದರ್ ನೀಡಿದ್ದಾರೆ.