ಉಳ್ಳಾಲ,ಅ 08 (MSP): ಒಂದೇ ದಿನ ತಂದೆ ಮತ್ತು ಮಗಳು ಮೃತಪಟ್ಟ ಘಟನೆ ಉಳ್ಳಾಲದ ಹಳೆಕೋಟೆ ಬಳಿ ಸೋಮವಾರ ನಡೆದಿದೆ. ಮೃತರನ್ನು ಹಳೆಕೋಟೆ ನಿವಾಸಿ ಯು.ಕೆ. ಮಹಮ್ಮದ್(80) ಮತ್ತು ಅವರ ಪುತ್ರಿ ಜಮೀಲ(38) ಎಂದು ಗುರುತಿಸಲಾಗಿದೆ.
ಜ್ವರದಿಂದ ಬಳಲುತ್ತಿದ್ದ ಜಮೀಲ ನಾಲ್ಕು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ಮೃತಪಟ್ಟರು. ಮೃತ ಜಮೀಲ ಅವರ ತಂದೆ ಮಹಮ್ಮದ್ ಅನಾರೋಗ್ಯದಿಂದ ಬಳಲುತ್ತಿದ್ದು, ಸೋಮವಾರ ಬೆಳಗ್ಗೆ 8.30ರವೇಳೆಗೆ ಮೃತರಾಗಿದ್ದಾರೆ. ಮಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ವಿಚಾರ ಮಹಮ್ಮದ್ ಅವರಿಗೆ ತಿಳಿಸಿರಲಿಲ್ಲ. ಮೃತ ಜಮೀಲ ಅವರ ಮನೆ ತವರು ಮನೆಯ ಸಮೀಪದಲ್ಲೇ ಇದ್ದು, ಮಗಳ ಮೃತದೇಹ ಮನೆಗೆ ಬಂದ ವಿಚಾರ ತಿಳಿದ ನಂತರ ತಂದೆ ಯು.ಕೆ. ಮಹಮ್ಮದ್ ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ. ಮಹಮ್ಮದ್ ಅವರು ಪತ್ನಿ ಐವರು ಪುತ್ರಿಯರು ಮತ್ತು ಆರು ಮಂದಿ ಪುತ್ರರನ್ನು ಅಗಲಿದ್ದಾರೆ. ಮೃತ ಜಮೀಲ ಓರ್ವ ಪುತ್ರನನ್ನು ಅಗಲಿದ್ದಾರೆ.