ಸುಳ್ಯ, ಅ. 09(MSP): ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಚಿರತೆ ಕರುವೊಂದರ ಮೇಲೆ ದಾಳಿ ನಡೆಸಿ, ಅರ್ಧ ತಿಂದು ಹಾಕಿದ್ದ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.
ಸಾಂದರ್ಭಿಕ ಚಿತ್ರ
ಅಜ್ಜಾವರ ಗ್ರಾಮದ ಕಾಡಿನಂಚಿನ ಪ್ರದೇಶದಲ್ಲಿ ಚಿರತೆ ಇರುವ ಕುರಿತು ಈ ಹಿಂದೆ ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಅರಣ್ಯ ಇಲಾಖೆ ಕರ್ಲಪ್ಪಾಡಿಯಲ್ಲಿ ಬೋನ್ ಇರಿಸಿ ಚಿರತೆ ಹಿಡಿಯಲು ಕಾರ್ಯಾಚರಣೆ ನಡೆಸಿತ್ತು. ಇದೀಗ ತುದಿಯಡ್ಕ ಪ್ರದೇಶದಲ್ಲಿ ದನದ ಕರು ಚಿರತೆ ದಾಳಿಗೆ ಸತ್ತಿದೆ. ಅದರ ಮೇಲಿನ ಗಾಯವನ್ನು ಗಮನಿಸಿದಾಗ ನಾಯಿ ಚಿರತೆಯ ಗುಂಪು ದಾಳಿ ಮಾಡಿರುವಂತೆ ಕಾಣುತ್ತದೆ. ಇದರ ಬಗ್ಗೆ ಅರಣ್ಯ ಇಲಾಖೆಯ ತನಿಖೆಯ ಬಳಿಕ ಮಾಹಿತಿ ತಿಳಿಯಬೇಕಾಗಿದೆ.