ಮಂಗಳೂರು,ಅ 09(MSP): ಶಬರಿಮಲೆ ಅಯಪ್ಪ ದೇಗುಲವನ್ನು ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎನ್ನುವ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ದೇಶಾದಾದ್ಯಂತ ಪ್ರತಿಭಟನೆಗಳಷ್ಟೇ ಅಲ್ಲದೆ, ವಿದೇಶಗಳ ಅಯ್ಯಪ್ಪ ಭಕ್ತರಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ.
ಆಸ್ಟ್ರೇಲಿಯಾದಲ್ಲಿರುವ ಅಯ್ಯಪ್ಪಸ್ವಾಮಿಯ ಭಕ್ತರು ಪ್ರತಿಭಟನೆ ನಡೆಸಿದ್ದು, ಇವರ ಪ್ರತಿಭಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲ ತಾಣದಲ್ಲೂ ವೈರಲ್ ಆಗಿದೆ. ‘ಸೇವ್ ಶಬರಿಮಲೆ’ ಎನ್ನುತ್ತಾ ಅಯ್ಯಪ್ಪನ ನಾಮ ಸ್ಮರಣೆ ಯೊಂದಿಗೆ , ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಹಾಡುತ್ತಾ, ಸುಪ್ರೀಂ ತೀರ್ಪಿನಿಂದ ಅಯ್ಯಪ್ಪ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಪ್ರತಿಭಟನೆ ಮಾಡಿದ್ದಾರೆ.
ಇವರು ಅಯ್ಯಪ್ಪ ವ್ರತಧಾರಿಗಳು ಧರಿಸುವಂತೆ ಕಪ್ಪು ಬಣ್ಣದ ವಸ್ತ್ರಧರಿಸಿದ ನೂರಾರು ಅಯ್ಯಪ್ಪ ಭಕ್ತರು ಆಸ್ಟ್ರೇಲಿಯಾದ ರಸ್ತೆಗಿಳಿದು ಪ್ರತಿಭನೆ ನಡೆಸಿದ್ದಾರೆ. ರಸ್ತೆ ಬದಿ ಪ್ಲೆಕಾರ್ಡ್ ಹಾಗು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿರುವ ಆಸ್ಟ್ರೇಲಿಯಾದ ಅಯ್ಯಪ್ಪ ಸ್ವಾಮಿ ಭಕ್ತರು, ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿದ್ದಾರೆ. ಕೇರಳ ಸರಕಾರ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಒತ್ತಾಯಿಸಿದ್ದಾರೆ.