ಮಂಗಳೂರು,ಅ 10 (MSP): ಕರಾವಳಿಯಾದ್ಯಂತ ಅ.10 ರ ಬುಧವಾರದಿಂದ ನವರಾತ್ರಿ ಮಹೋತ್ಸವದ ಸಂಭ್ರಮ. ವಿವಿಧ ದೇವಾಲಯಗಳೂ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ಒಂಭತ್ತು ದಿನಗಳ ಉತ್ಸವ ವಿಶೇಷ ಪೂಜೆ, ಹೋಮ ಹವನಾದಿಗಳು ಅನ್ನ ಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ನವರಾತ್ರಿಯ ಒಂಬತ್ತೂ ದಿನಗಳಲ್ಲಿ ದೇವಿ ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲಿದ್ದಾರೆ. ಮನೆಗಳಲ್ಲಿಯೂ ನವರಾತ್ರಿ ಪೂಜೆಗಳು ನಡೆಯಲಿದೆ.
ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಕುದ್ರೋಳಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಅನ್ನಪೂರ್ಣೇಶ್ವರಿ ದೇವಸ್ಥಾನ, ಕೊಡ್ಯಡ್ಕ ಹೊಸನಾಡು ಅನ್ನಪೂರ್ಣೇಶ್ವರಿ ದೇಗುಲ, ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲ, ಉರ್ವ ಮಾರಿಗುಡಿ, ಬೋಳಾರ ಹಳೆಕೋಟೆ ಮಾರಿಯಮ್ಮ ಸೇರಿದಂತೆ ನಾನಾ ದೇವಿ ದೇವಸ್ಥಾನಗಳಲ್ಲಿ ಉತ್ಸವದ ಸಂಭ್ರಮ ಕಳೆಗಟ್ಟಿದೆ.
ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರದಲ್ಲಿ ನಡೆಯುವ ಮಂಗಳೂರು ದಸರಾವನ್ನು ಈ ಬಾರಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಕ್ಟೋಬರ್ 14ರಂದು ಸಂಜೆ 6 ಗಂಟೆಗೆ
ಉದ್ಘಾಟಿಸಲಿದ್ದಾರೆ. ಕುದ್ರೋಳಿ ನವರಾತ್ರಿಯ ಕೊನೆಯ ದಿನ ಅಕ್ಟೋಬರ್ 19ರಂದು ವೈಭವದ ಶೋಭಾಯಾತ್ರೆ ನಡೆಯಲಿದ್ದು, ನವದುರ್ಗೆಯರು ಸೇರಿದಂತೆ ಈ ಬಾರಿ 70ಕ್ಕೂ ಅಧಿಕ ಟ್ಯಾಬ್ಲೋಗಳು, 50ಕ್ಕೂ ಅಧಿಕ ಕಲಾತಂಡಗಳು ಭಾಗವಹಿಸಲಿವೆ