ಮಂಗಳೂರು, ಅ 10 (MSP): ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದ ಕುದ್ರೋಳಿಗೋಕರ್ಣನಾಥ ದೇವಸ್ಥಾನದಲ್ಲಿ ಇಂದಿನಿಂದ ನವರಾತ್ರಿಯ ಸಂಭಮ ಕಳೆಕಟ್ಟಿದೆ. ಮಂಗಳೂರು ದಸರಾವನ್ನು ಕರ್ಣಾಟಕ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಭಟ್ ದೀಪ ಬೆಳಗಿಸುವ ಮೂಲಕ ಕುದ್ರೋಳಿಯಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.
ಜಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಕುದ್ರೋಳಿ ದೇವಸ್ಥಾನದ ಆವರಣ ಪ್ರವಾಸಿಗರನ್ನು ಸೆಳೆಯುತ್ತಿದ್ದು ಸಜ್ಜಾಗಿದ್ದು, ಅನ್ನಸಂತರ್ಪಣೆ, ಸಂಜೆ ಹೊತ್ತಲ್ಲಿ ನಡೆಯುವ ದೇಶ, ವಿದೇಶ ಖ್ಯಾತಿಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವಕ್ಕೆ ಮತ್ತಷ್ಟು ಕಳೆ ಕಟ್ಟಲಿದೆ.
ಅ. 19ರಂದು ಸಂಜೆ 4 ಗಂಟೆಗೆ ಮಂಗಳೂರು ದಸರಾ ವೈಭವದ ಮೆರವಣಿಗೆ ಆರಂಭವಾಗಲಿದೆ. ಶಾರದಾ ಮಾತೆಯ ಶೋಭಾಯಾತ್ರೆ ಮತ್ತು ವಿಸರ್ಜನಾ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬರುವ 75ಕ್ಕೂ ಅಧಿಕ ಸ್ತಬ್ಧಚಿತ್ರಗಳು, ಹುಲಿವೇಷಗಳು ದಸರಾ ಮೆರವಣಿಗೆಯಲ್ಲಿ ಗಮನಸೆಳೆಯಲಿದೆ. ಸುಮಾರು 6 ಕಿ.ಮೀ.ಉದ್ದಕ್ಕೆ ಸಾಗುವ ಶೋಭಾಯಾತ್ರೆಯ ಕೊನೆಯಲ್ಲಿ ಕುದ್ರೋಳಿ ದೇವಸ್ಥಾನದ ಪುಷ್ಕರಿಣಿಯಲ್ಲಿ ಅಕ್ಟೋಬರ್ 20ರ ಬೆಳಿಗ್ಗೆ ಶಾರದೆ ಮತ್ತು ನವದುರ್ಗೆಯರ ವಿಸರ್ಜನೆ ನಡೆಯಲಿದೆ.