ಮೂಡುಬಿದಿರೆ, ಅ 11 (MSP): ಸುಮಾರು 50,000 ಮೌಲ್ಯದ ಶ್ರೀಗಂಧದ ಕೊರಡುಗಳನ್ನು ಕದ್ದೊಯ್ಯುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಅರಣ್ಯಾ ಇಲಾಖಾಧಿಕಾರಿಗಳು ಮಂಗಳವಾರ ರಾತ್ರಿ ಪಾಲಡ್ಕ ಮಾವಿನಕಟ್ಟೆಯಲ್ಲಿ ಬೈಕ್ ಸಹಿತ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಹಂಡೇಲು ನಿವಾಸಿ ಹಸನ್ ಬಾವಾ ಹಾಗೂ ಕಂಚಿಬೈಲು ನಿವಾಸಿ ರಮೇಶ ಬಂಧಿತ ಆರೋಪಿಗಳಾಗಿದ್ದಾರೆ. ವರ್ಣಬೆಟ್ಟುವಿನ ಶಿವಾನಂದ ತಲೆಮರೆಸಿಕೊಂಡ ಆರೋಪಿ. ಆರೋಪಿಗಳು ತಮ್ಮ ಬೈಕ್ನಲ್ಲಿ ಕಡಂದಲೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದಾಗ ಕಡಂದಲೆಯಲ್ಲಿ ಗಸ್ತು ತಿರುಗುತ್ತಿದ್ದ ಉಪ ವಲಯ ಅರಣ್ಯಾಧಿಕಾರಿಗಳಾದ ಅಶ್ವಿತ್ ಗಟ್ಟಿ, ಮಂಜುನಾಥ ಗಾಣಿಗ ಅವರು ಸಂಶಯಗೊಂಡು ಬೈಕ್ನ್ನು ನಿಲ್ಲಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್ ಅಚ್ಚಪ್ಪ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು ಅರಣ್ಯ ರಕ್ಷಕರಾದ ರಾಜು, ಸಂದೀಪ್ ಮತ್ತು ಬಸವರಾಜ್ ಮತ್ತಿತರರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.