ಉಡುಪಿ, ಅ12(SS): ಇಲ್ಲಿನ ಪರಿಸರದಲ್ಲಿ ಅಸಾಹಯಕ ಸ್ಥಿತಿಯಲ್ಲಿ ಅತ್ತಿತ್ತಾ ಅಲೆದಾಡುತ್ತಿದ್ದ ಅನಾಥೆ ವೃದ್ಧೆಯೊಬ್ಬರನ್ನು ಉಡುಪಿ ಜಿಲ್ಲಾ ಕರವೇ ಸಂಘಟನೆ ರಕ್ಷಿಸಿದ ಘಟನೆ ನಡೆದಿದೆ.
ಸರೋಜಮ್ಮ ಅಸಾಹಯಕ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಅನಾಥೆ ವೃದ್ಧೆ.
ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ದಿಕ್ಕು ಗುರಿಯಿಲ್ಲದೆ ಒಬ್ಬಂಟಿಯಾಗಿ ಅಸಾಹಯಕ ಸ್ಥಿತಿಯಲ್ಲಿದ್ದ ಸರೋಜಮ್ಮ ಎಂಬ ಬೆಂಗಳೂರು ಮೂಲದ ವೃದ್ದೆಯೊಬ್ಬರನ್ನು ಕರವೇ ಜಿಲ್ಲಾಧ್ಯಕ್ಷರು ಹಾಗೂ ಅವರ ತಂಡ ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಳೆದ 19 ವರ್ಷಗಳಿಂದ ತನ್ನ ಮಕ್ಕಳಿಂದ ದೌರ್ಜನ್ಯಕ್ಕೆ ಒಳಗಾಗಿ ದೂರವಾದ ಇವರು ಮುಂಬೈ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಭಿಕ್ಷೆ ಬೇಡುತ್ತಿದ್ದರು. ಇತ್ತೀಚಿಗಷ್ಟೇ ಉಡುಪಿಗೆ ಬಂದ ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಅಸಾಹಯಕ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದರು. ಕೂಡಲೇ ಇವರನ್ನು ಕರವೇ ತಂಡ ಗಮನಿಸಿ, ರಕ್ಷಿಸಿ ಉಡುಪಿಯ ಬೀಡಿನ ಗುಡ್ಡೆಯಲ್ಲಿರುವ ವಸತಿ ರಹಿತ ಆಶ್ರಯದಲ್ಲಿ ತಾತ್ಕಲಿಕ ಆಶ್ರಯ ಕಲ್ಪಿಸಿದ್ದಾರೆ.