ಮಂಗಳೂರು, ಅ12(SS): ಸ್ಮಾರ್ಟ್ ಸಿಟಿ ಹಣ ಕಸಾಯಿಖಾನೆಗೆ ಮೀಸಲಿಟ್ಟ ವಿಚಾರಕ್ಕೆ ಸಂಬಂಧಿಸಿ ಪಾಲಿಕೆ ಮುಂಭಾಗ ವಿಶ್ವಹಿಂದೂ ಪರಿಷತ್-ಬಜರಂಗದಳ ಪ್ರತಿಭಟನೆ ನಡೆಸಿದೆ.
ಈ ವೇಳೆ ಮಾತನಾಡಿದ ದುರ್ಗಾವಾಹಿನಿ ಸಂಚಾಲಕಿ ವಿದ್ಯಾಮಲ್ಯ, ಖಾದರ್ ನರಳಿ ನರಳಿ ಗೋ ಮೂತ್ರ ಕುಡಿಯಲಿ. ಸಚಿವ ಯು.ಟಿ.ಖಾದರ್ ಗೆ ಗೋ ಮಾತೆಯ ಶಾಪ ತಟ್ಟಿ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯಿಂದ ಸದ್ಯಕ್ಕಂತೂ ನೀವು ಬರಬಾರದು ಅಂತ ಗೋ ಮಾತೆಯಲ್ಲಿ ಪ್ರಾರ್ಥಿಸ್ತೇನೆ ಎಂದು ಹೇಳಿದ್ದಾರೆ.
ಅಕ್ರಮಗಳ ಆರೋಪ ಹೊಂದಿರುವ ಕಸಾಯಿಖಾನೆಗೆ ಸ್ಮಾರ್ಟ್ ಸಿಟಿಯ 15 ಕೋಟಿ ರೂಪಾಯಿ ಅನುದಾನವನ್ನು ನೀಡಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ವಿವಾದ ಸೃಷ್ಠಿಸಿದ್ದಾರೆ. ಆಸ್ಪತ್ರೆಯಲ್ಲಿ ನರಳಿ ನರಳಿ ಗೋ ಮಾತ್ರೆ ಮೂತ್ರ ಕುಡಿಯುವ ಪರಿಸ್ಥಿತಿ ಖಾದರ್ ಅವರಿಗೆ ಬರಲಿ. ಗೋ ಮೂತ್ರ ಕುಡಿದ ನಂತರ ಗೋ ಮಾತೆ ಆಶೀರ್ವಾದ ಬೇಡಲು ಬನ್ನಿ ಎಂದು ವಿದ್ಯಾಮಲ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.